Select Your Language

Notifications

webdunia
webdunia
webdunia
webdunia

ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಹೆಂಡ್ತಿ! ಮುಂದೇನಾಯ್ತು?

ವಿಜಯನಗರ
ವಿಜಯನಗರ , ಗುರುವಾರ, 19 ಮೇ 2022 (09:27 IST)
ವಿಜಯನಗರ : ಇದು ಉಂಡ ಮನೆಗೆ ಕನ್ನ ಹಾಕೋ ಸ್ನೇಹಿತನೊಬ್ಬನ ಕತರ್ನಾಕ್ ಕಥೆ. ಹೌದು, ಅವರಿಬ್ಬರು ಹಲವು ವರ್ಷಗಳಿಂದ ಆಪ್ತ ಸ್ನೇಹಿತರಾಗಿದ್ರು.

ಒಂದೇ ಊರಿನಲ್ಲಿ ಅಕ್ಕ ಪಕ್ಕದ ಮನೆಯಲ್ಲೆ ವಾಸವಾಗಿದ್ರು. ಕಷ್ಟಕಾಲದಲ್ಲಿ ಆ ಗೆಳೆಯ , ಆಪ್ತ ಸ್ನೇಹಿತನಿಗೆ ತನ್ನ ಮನೆ ಬಾಡಿಗೆ ಸಹ ಕೊಟ್ಟಿದ್ದ. ಆದ್ರೆ ಸ್ನೇಹಿತ ಮಾಡಿರೋ ಕೆಲಸ ನೋಡಿದ್ರೇ ನಾಗರೀಕ ಸಮುದಾಯವೇ ತಲೆ ತಗ್ಗಿಸಬೇಕಿದೆ.

ಯಾಕಂದ್ರೇ, ಆಪ್ತ ಸ್ನೇಹಿತನ ಪತ್ನಿಯನ್ನೆ ಪಟಾಯಿಸಿ ಲವ್ವಿಡವ್ವಿ ಶುರುವಿಟ್ಟ ಕೊಂಡ ಅವನು, ಅಕ್ರಮ ಸಂಬಂಧಕ್ಕಾಗಿ ಆಪ್ತ ಸ್ನೇಹಿತನ ಕೊಲೆಗೆ ಸೆಚ್ಕ್ ಹಾಕಿದ್ದಾನೆ. ಉಂಡ ಮನೆಗೆ ದ್ರೋಹ ಬಗೆದ ಆ ಮನೆಹಾಳ ಸ್ನೇಹಿತನ ವಿರುದ್ದ ಈಗ ದೂರು ದಾಖಲಾಗಿದೆ..

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಚಪ್ಪರದಹಳ್ಳಿ ನಿವಾಸಿಯಾದ ಸಿದ್ದೇಶ ಕಳೆದ 15 ವರ್ಷಗಳ ಹಿಂದೆಯೇ ಮಾವನ ಮಗಳಾದ ಕಲ್ಪನಾಳನ್ನು ಮದುವೆಯಾಗಿದ್ದರು. ಅಡುಗೆ ಕೆಲಸ ಮಾಡಿಕೊಂಡು ತಕ್ಕಮಟ್ಟಿಗೆ ಸಂಪಾದನೆ ಮಾಡ್ತಿದ್ದನು.

ಸಿದ್ದೇಶ ಹಾಗೂ ಕಲ್ಪನಾಳ ಸುಖ ಸಂಸಾರಕ್ಕೆ ಸಾಕ್ಷಿಯಾಗಿ ಇಬ್ಬರು ಗಂಡು ಜನಿಸಿದ್ದಾರೆ. ಆದ್ರೇ, ಸಿದ್ದೇಶನ ಸುಖ ಸಂಸಾರದಲ್ಲಿ ಹುಳಿಹಿಂಡಿದ್ದು ಮಾತ್ರ ಆಪ್ತ ಸ್ನೇಹಿತ ಕೊಟ್ರೇಶ. ಕಷ್ಟದಲ್ಲಿದ್ದ ಸ್ನೇಹಿತ ಕೊಟ್ರೇಶನಿಗೆ ಮನೆ ಬಾಡಿಗೆ ಕೊಟ್ರೆ ಆ ಪುಣ್ಯಾತ್ಮ ಸ್ನೇಹಿತ ಸಿದ್ದೇಶ ಪತ್ನಿಯನ್ನೆ ಪಟಾಯಿಸಿ  ಮೋಸ ಮಾಡಿದ್ದಾನೆ.

ಕಳೆದ ಮೂರು ವರ್ಷಗಳ ಹಿಂದೆ ಸ್ನೇಹಿತನ ಮನೆಯಲ್ಲಿ ಬಾಡಿಗೆಗಿದ್ದ ಕೊಟ್ರೇಶ ಸ್ನೇಹಿತನ ಪತ್ನಿಯ ಜೊತೆಯೇ ಲವ್ವಿಡವ್ವಿ ಶುರುವಿಟ್ಟುಕೊಂಡು ಇದೀಗ ಸ್ನೇಹಿತನನ್ನೆ ಕೊಲೆ ಮಾಡಲು ಕೊಟ್ರೇಶ್ ಸ್ಜೆಚ್ ಹಾಕಿದ್ದಾನೆ. ಅದೃಷ್ಟವಾಶಾತ್ ಕೊಲೆ ನಡೆಯದೇ ಇದ್ರೂ ತಲೆಯ ಮೇಲೆ ಬಲವಾದ ಪೆಟ್ಟು ಬಿದ್ದಿದೆ. 

ಈ ಕುರಿತು ಮೋಸಕ್ಕೊಳಗಾದ ಪತಿ ಸಿದ್ದೇಶ್  ತನ್ನ ಪತ್ನಿ ಕಲ್ಪನಾ ಮತ್ತು ಮೋಸ ಮಾಡಿ ಹಲ್ಲೆ ಮಾಡಿದ ಕೊಟ್ರೇಶ ವಿರುದ್ಧ ಕೊಟ್ಟೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಥಳೀಯ ಸಂಸ್ಥೆ ಎಲೆಕ್ಷನ್ ಸುಪ್ರೀಂ ಸಮ್ಮತಿ