ಬೆಂಗಳೂರು- ನಗರದಲ್ಲಿ ಪ್ರೇಮಿಗಳ ದಿನಾಚರಣೆಯಂದು ಮದ್ಯಪಾನ ನಿಷೇಧ ಮಾಡಿರುವುದಕ್ಕೆ ಹೋಟೆಲ್ ಹಾಗೂ ಬಾರ್ ಅಸೋಸಿಯೇಷನ್ ನಿಂದ ಅಸಮಾಧಾನ ವ್ಯಕ್ತವಾಗಿದೆ.ಫೆಬ್ರವರಿ 16 ರಂದು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ವಿಧಾನ ಪರಿಷತ್ತಿನ ಉಪಚುನಾವಣೆ ಈ ಹಿನ್ನೆಲೆಯಲ್ಲಿ ಫೆಬ್ರವರಿ 14 ರಿಂದಲೇ ಮದ್ಯಪಾನ ನಿಷೇಧ ಮಾಡಬೇಕು.
ಫೆಬ್ರವರಿ 14 ಸಂಜೆ 5 ರಿಂದ ಫೆಬ್ರವರಿ 16 ವರೆಗೆ ಸಿಲಿಕಾನ್ ಸಿಟಿಗೆ ಡ್ರಿಂಕ್ಸ್ ಗೆ ಬ್ರೇಕ್ ಹಾಕಬೇಕು ಎಂದು ಡ್ರೈ ಡೇ ಘೋಷಣೆ ವಿರುದ್ದ ಹೋಟೆಲ್ ಮತ್ತು ಬಾರ್ ಮಾಲೀಕರು ಸಿಡಿದೆದ್ದಿದ್ದಾರೆ. ಅಲ್ಲದೇ ನಿಯಮ ಸಡಿಲಗೊಳಿಸುವಂತೆ ಹೋಟೆಲ್ ಅಸೋಸಿಯೇಷನ್ ನಿಂದ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.