ಪ್ರೀತಿ ಮಾಡಬಾರದು ಮಾಡಿದರೆ ಜಗಕ್ಕೆ ಹೆದರಬಾರದು, ಅನ್ನೋ ಈ ಹಾಡಿನ ಸಾಲುಗಳು ಎಲ್ಲರಿಗೂ ಸ್ಪೂರ್ತಿ ಆದ್ರೆ ಯಾವ ವಯಸ್ಸಿನಲ್ಲಿ ಪ್ರೀತಿಸಬೇಕು ಅನ್ನೋದು ತುಂಬಾ ಇಂಪಾರ್ಟೆಂಟ್. ಇಲ್ಲೋಬ್ಬ ಯುವಕ ಪ್ರೀತಿಸಿದ ತಪ್ಪಿಗೆ ವಿಡಿಯೋ ಮಾಡಿ ಪ್ರಾಣ ಕಳೆದುಕೊಂಡಿದ್ದಾನೆ.ನನ್ನ ಸಾವಿಗೆ ನನ್ನ ಹೆಂಡತಿ ಹಾಗೂ ಅವರ ಅಪ್ಪ, ಅಮ್ಮ ಎಂದು ಹೇಳುತ್ತ ಸಾವಿನ ಮನೆಯ ಬಾಗಿಲು ಬಡಿಯುತ್ತಿರುವ ಯುವಕನ ಹೆಸರು. ಶಶಿಧರ್ ವಿಜಯಪುರ ಜಿಲ್ಲೆಯ ಬಸವನಬಾಗೇಡಿಯವನು.ಪ್ರೀತಿಸಿದ ಯುವತಿ ಪೋಷಕರ ಮಾತು ಕೇಳಿ ನನ್ನನ್ನ ಬಿಟ್ಟು ಹೋಗಿದ್ದಾಳೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಿಲಿಕಾನ್ ಸಿಟಿಯ ಕಾಟನ್ ಪೇಟೆಯಲ್ಲಿರೋ ಗಜಾನನ ಲಾಡ್ಜ್ ನಲ್ಲಿ ಪಾಗಲ್ ಪ್ರೇಮಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಸವನಬಾಗೆವಾಡಿ ಮೂಲು ಶಶಿಧರ್ ಲಾಡ್ಜ್ ನ ರೂಮಿನಲ್ಲಿ ಫ್ಯಾನ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಪ್ರಾಪ್ತ ಬಾಲಕಿಯನ್ನ ಪ್ರೀತಿಸಿ ಮದುವೆಯಾಗಿದ್ದ ಶಶಿಧರ್ ಮೇಲೆ ಬಾಲಕಿಯ ಪೋಷಕರು ಪೋಕ್ಸೋ ಕೇಸ್ ದಾಖಲಿಸಿದ್ದರು.
ಪ್ರಕರಣ ಹಿನ್ನೆಲೆ ಬಸವನಬಾಗೇವಾಡಿ ಪೊಲೀಸ್ರು ಶಶಿಧರ್ ಬಂಧನಕ್ಕೆ ಮುಂದಾಗಿದ್ರು. ಪೊಲೀಸ್ರು ಅರೆಸ್ಟ್ ಮಾಡ್ತಾರೆ ಅಂತ ಹೆದರಿ ಶಶಿಧರ್ ಬೆಂಗಳೂರಿಗೆ ಬಂದಿದ್ದ. ಕಳೆದ ಎರಡು ದಿನಗಳಿಂದ ಗಜಾನನ ಲಾಡ್ಜ್ ನಲ್ಲಿ ರೂಮ್ ಮಾಡಿಕೊಂಡಿದ್ದ ಶಶಿಧರ್
ನಿನ್ನೆ ರಾತ್ರಿಯೇ ರೂಮ್ ನಲ್ಲಿರೋ ಫ್ಯಾನ್ ಗೆ ನೇಣುಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಇಂದು ಲಾಡ್ಜ್ ನ ಸಿಬ್ಬಂದಿ ರೂಮ್ ಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೂ ಮುನ್ನ ಇನ್ಸ್ಟಾಗ್ರಾಂ ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ ಶಶಿಧರ್ ಆರು ವರ್ಷ ಲವ್ ಮಾಡಿ ಮದುವೆ ಮಾಡಿಕೊಂಡಿದ್ದಾಳೆ.ಈಗ ಜಾತಿ ಸಲುವಾಗಿ ಅವರು ನನ್ನ ಮೇಲೆ ದೂರು ನೀಡಿದ್ದಾರೆ.ನನ್ನ ಸಾವಿಗೆ ಬಾಲಕಿ ಅಪ್ಪ, ಅಮ್ಮ ಮತ್ತು ಅವರ ಕಾಕಾ, ಅವರಜ್ಜಿ ಕಾರಣ ಅಂತ ವಿಡಿಯೋ ಹಾಕಿದ್ದಾನೆ. ಸಾಲದಕ್ಕೆ ಯುವತಿಯೊಂದಿಗಿನ ಖಾಸಗಿ ಫೋಟೋ ಗಳನ್ನ ಇನ್ಸ್ಟಾ್ಗ್ರಾಮ್ ನಲ್ಲಿ ಪಾಗಲ್ ಪ್ರೇಮಿ ಅಪ್ಲೋಡ್ ಮಾಡಿ ನೇಣಿಗೆ ಶರಣಾಗಿದ್ದಾನೆ.ಜೊತೆಗೆ ಪೊಲೀಸ್ರು ಮೇಲೂ ಆರೋಪ ಮಾಡಿದ್ದು, ಪೊಲೀಸ್ರು ನನ್ನ ಕಂಪ್ಲೇಂಟ್ ತಗೊಂತಿಲ್ಲ, ಅವರ ವಿರುದ್ಧವೂ ತನಿಖೆ ಮಾಡುವಂತೆ ವಿಡಿಯೋ ಮಾಡಿದ್ದಾನೆ.