ಚಿಕ್ಕಮಗಳೂರು : ಜಿಲ್ಲೆಯಲ್ಲಿ ಅನ್ಯ ಕೋಮಿನ ಯುವಕ ಹಾಗೂ ಯುವತಿ ರಿಜಿಸ್ಟರ್ ಮ್ಯಾರೇಜ್ ಆಗಲು ಹೊರಟಿದ್ದ ಸಂದರ್ಭ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಅವರನ್ನು ತಡೆದಿರುವ ಘಟನೆ ನಡೆದಿದೆ.
ಆದರೆ ಈ ಮದುವೆಗೆ ನನ್ನ ಯಾವುದೇ ಆಕ್ಷೇಪವಿಲ್ಲ, ಅವರಿಬ್ಬರು ಸಂತೋಷವಾಗಿದ್ದರೆ ಅಷ್ಟೇಸಾಕು ಎಂದು ಯುವತಿಯ ತಾಯಿ ಹೇಳಿಕೆ ನೀಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಉಮಾ ಪ್ರಶಾಂತ್, ಸಬ್ ರಿಜಿಸ್ಟರ್ ಕಚೇರಿಯಲ್ಲಿ ಅನ್ಯ ಕೋಮಿನ ಯುವಕ ಹಾಗೂ ಯುವತಿ ವಿವಾಹ ನೋಂದಣಿ ಮಾಡಲೆಂದು ಇಂದು ಹೋಗಿದ್ದರು. ಈ ಸಂದರ್ಭ ಕೆಲ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಅವರನ್ನು ತಡೆದು, ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ ಎಂದರು.
ಈ ವೇಳೆ ಯುವಕ ತನ್ನ ಮೇಲೆ ಹಿಂದೂ ಪರ ಸಂಘಟನೆಯವರು ಹಲ್ಲೆ ನಡೆಸಿರುವುದಾಗಿ ತಿಳಿಸಿದ್ದಾನೆ. ಅವನ ದೂರಿನನ್ವಯ ಹಿಂದೂ ಪರ ಸಂಘಟನೆಯ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.