Publish Date: Mon, 08 Apr 2019 (17:56 IST)
Updated Date: Mon, 08 Apr 2019 (17:58 IST)
ಅನುಮಾನಸ್ಪಾದ ರೀತಿಯಲ್ಲಿ ರೈಲ್ವೆ ಹಳಿ ಬಳಿ ಯುವಕನ ಶವ ಪತ್ತೆಯಾಗಿರುವ ಘಟನೆ ನಡೆದಿದೆ.
ದಾವಣಗೆರೆ ನಗರದ ಡಿಸಿಎಂ ಟೌನ್ ಶೀಪ್ ಬಳಿ ರೈಲ್ವೆ ಹಳಿ ಬಳಿ ಈ ಘಟನೆ ನಡೆದಿದೆ.
ದಾವಣಗೆರೆ ನಗರದ ಕೆಟಿಜೆ ನಗರದ ನಿವಾಸಿಯಾಗಿರುವ ಪಿಯುಸಿ ವಿದ್ಯಾರ್ಥಿ ಸಾಗರ್ (18) ಸಾವನ್ನಪ್ಪಿರುವ ಯುವಕ ಎಂದು ಹೇಳಲಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ದೇಹದ ಬಹುತೇಕ ಭಾಗಗಳಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದ್ದು, ಲವ್ ಕೇಸ್ ಕೊಲೆಗೆ ಕಾರಣವಿರಬಹುದಾ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ.
ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.