Publish Date: Thu, 08 Mar 2018 (13:37 IST)
Updated Date: Thu, 08 Mar 2018 (13:43 IST)
ಬೆಂಗಳೂರು: ಲೋಕಾಯು ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿಗೆ ನಿನ್ನೆ ಅವರ ಕಚೇರಿಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಆರೋಪಿ ತೇಜ್ ರಾಜ್ ಶರ್ಮಾ ವಿಚಿತ್ರ ಹೇಳಿಕೆ ನೀಡಿದ್ದಾನೆ.
ಪೊಲೀಸ್ ವಿಚಾರಣೆ ವೇಳೆ ಆರೋಪಿ ತೇಜ್ ರಾಜ್, ಈ ಕೃತ್ಯ ಮಾಡಲು ನನಗೆ ಯೂ ಟ್ಯೂಬ್, ಭಗವದ್ಗೀತೆಯ ಉಪದೇಶಗಳೇ ಪ್ರೇರಣೆ ಎಂದಿದ್ದಾನೆ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಉಪದೇಶದಿಂದ ಅರ್ಜುನನಿಗೆ ಗೆಲುವಾಯಿತು. ನಾನೂ ಅರ್ಜುನನಂತೆ ವಿಶಾಖ ನಕ್ಷತ್ರದಲ್ಲಿ ಹುಟ್ಟಿದವನು. ಅಧರ್ಮದ ವಿರುದ್ಧ ಗೆಲ್ಲಬೇಕಿತ್ತು. ಕೊನೆಗೂ ನಾನು ಧರ್ಮ ಯುದ್ಧದಲ್ಲಿ ನಾನು ಗೆದ್ದಿದ್ದೇನೆ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ.
ಈತ ಕಳೆದ ಒಂದು ತಿಂಗಳಿನಿಂದ ಹತ್ಯೆಗೆ ಸಂಚು ರೂಪಿಸಿದ್ದನಂತೆ. ಪ್ರತೀ ಬಾರಿಯೂ ದೇವರ ಫೋಟೋವನ್ನು ಮುಚ್ಚಿಟ್ಟುಕೊಂಡು ಬರುತ್ತಿದ್ದನಂತೆ. ಇಂತಹಾ ವಿಚಿತ್ರ ಹೇಳಿಕೆಗಳನ್ನು ಪೊಲೀಸರಿಗೆ ನೀಡುತ್ತಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ