Publish Date: Mon, 25 Feb 2019 (15:52 IST)
Updated Date: Mon, 25 Feb 2019 (15:53 IST)
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸ್ಪರ್ಧೆ ತೀರ್ಮಾನ ಅಂತಿಮ ಹಂತ ತಲುಪಿದೆ.
ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಒಂದು ವಾರದೊಳಗೆ ಸ್ಪಷ್ಟ ನಿರ್ಣಯ ಆಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ. ಮಂಗಳೂರಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರಕಾರ ಅಂದ ಮೇಲೆ ಮೈತ್ರಿ ಧರ್ಮ ಪಾಲಿಸುವುದು ಮುಖ್ಯ.
ಯಾವೆಲ್ಲ ಸೀಟುಗಳನ್ನು ಬಿಟ್ಟು ಕೊಡಬೇಕೆಂದು ನಿರ್ಣಯಿಸಲಿದ್ದೇವೆ ಎಂದರು. ಇದೇ ವೇಳೆ ಮೋದಿ ವಿರುದ್ಧ ಕಿಡಿಕಾರಿದ ಅವ್ರು, ಪುಲ್ವಾಮಾ ಘಟನೆ ಮೋದಿ ಸರಕಾರದ ದೊಡ್ಡ ವೈಫಲ್ಯ. ಕೇಂದ್ರ ಸರಕಾರದ ಇಂಟೆಲಿಜೆನ್ಸ್ ವೈಫಲ್ಯ ಆಗಿದ್ದರಿಂದ ಯೋಧರು ಸಾವನ್ನಪ್ಪಿದ್ದಾರೆ.
ದೇಶಪ್ರೇಮದ ನಾಟಕವಾಡುವ ಬಿಜೆಪಿಗೆ ಮತ ಕೇಳುವ ಹಕ್ಕಿಲ್ಲ. ಮೋದಿ ಸುಳ್ಳಿನಿಂದ ದೇಶ ಕಟ್ಟಲು ಹೊರಟಿದ್ದಾರೆ. ಸುಖಾಸುಮ್ಮನೆ ಪ್ರಚಾರಕ್ಕಾಗಿ 5 ಸಾವಿರ ಕೋಟಿ ಖರ್ಚು ಮಾಡುತ್ತಿದ್ದಾರೆ. ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತ ವ್ಯಯವಾಗ್ತಿದೆ ಎಂದು ಕಿಡಿಕಾರಿದ್ರು.