Select Your Language

Notifications

webdunia
webdunia
webdunia
Saturday, 12 April 2025
webdunia

ಬೆಳಗಾವಿ, ಬೆಂಗಳೂರಿನ ಜನರಿಂದ ಲಾಕ್ ಡೌನ್ ಆದೇಶ ಉಲ್ಲಂಘನೆ

ಬೆಳಗಾವಿ
ಬೆಳಗಾವಿ , ಮಂಗಳವಾರ, 24 ಮಾರ್ಚ್ 2020 (11:14 IST)
ಬೆಳಗಾವಿ : ಕೊರೊನಾ ಭೀತಿ ಹಿನ್ನಲೆ  ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶವಿದ್ದರೂ, ನಿಯಮವನ್ನು ಉಲ್ಲಂಘಿಸಿ ಅಲ್ಲಲ್ಲಿ ಜನಜಂಗುಳಿ ಸೇರುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಬೆಳಗಾವಿ ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶವಿದ್ದರೂ ನಿಯಮ ಉಲ್ಲಂಘಿಸಿ ಬೆಳಗಾವಿಯ ಗೋಕಾಕ್ ಸಂತೆಯಲ್ಲಿ ಜನಸಾಗರ ತುಂಬಿಕೊಂಡಿದೆ. ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ ಸೇರಿದ್ದು, ಪೊಲೀಸರು ಜನರ ಗುಂಪನ್ನು ಚದುರಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.


ಹಾಗೇ ಬೆಂಗಳೂರಿನ ಯಶವಂತಪುರದ ಎಪಿಎಂಸಿಯಲ್ಲಿ ಲಾಕ್ ಡೌನ್ ಆದೇಶವಿದ್ದರೂ ನಿಯಮ ಉಲ್ಲಂಘಿಸಿ ಜನಜಂಗುಳಿ ಸೇರಿದೆ. ಕೆಲಸಕ್ಕೆ ಹೋಗಲು ಸರ್ಕಾರಿ ನೌಕರರಿಗೆ ಮಾತ್ರ ಅನುಮತಿ ನೀಡಲಾಗಿತ್ತು. ಆದರೆ ಅಲ್ಲಲ್ಲಿ ಜನರು ಓಡಾಡುತ್ತಿದ್ದಾರೆ. ಗುಂಪು ಸೇರದಂತೆ ಪೊಲೀಸರು ತಿಳಿಸಿದ್ದರೂ ಪೊಲೀಸರ ಆದೇಶಕ್ಕೂ ಡೋಂಟ್ ಕೇರ್ ಎನ್ನುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಕೂಡ ಪೆಟ್ರೋಲ್ , ಡಿಸೇಲ್ ಬೆಲೆಯಲ್ಲಿ ಸ್ಥಿರತೆ