Publish Date: Tue, 24 Mar 2020 (07:15 IST)
Updated Date: Tue, 24 Mar 2020 (07:16 IST)
ಬೆಂಗಳೂರು : ಕೆಲಸದ ಒತ್ತಡದಿಂದ, ಸರಿಯಾಗಿ ನಿದ್ದೆ ಮಾಡದಿದ್ದಾಗ, ಟೆನ್ಷನ್ ನಿಂದ ಕೆಲವರಿಗೆ ತಲೆ ನೋವು ಶುರುವಾಗುತ್ತದೆ. ಇದು ತುಂಬಾ ಕಿರಿಕಿರಿಯನ್ನು ಉಂಟುಮಾಡುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.
ಅಲೋವೆರಾವನ್ನು ಮುಖದ ಅಂದಹೆಚ್ಚಿಸಲು ಹಚ್ಚುತ್ತಾರೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಅದೇರೀತಿ ತುಂಬಾ ತಲೆ ನೋವಿದ್ದಾಗ ಅಲೋವೆರಾದ ತಿರುಳನ್ನು ಹಣೆಗೆ ಹಚ್ಚಿ ಬಟ್ಟೆ ಕಟ್ಟಿಕೊಂಡು ಕೊಂಚ ವಿಶ್ರಾಂತಿ ಪಡೆದರೆ ತಲೆನೋವು ಕಡಿಮೆಯಾಗುತ್ತದೆ.