ಮನೆಯಲ್ಲಿರುವ ನಕರಾತ್ಮಕ ಶಕ್ತಿಗಳನ್ನು ಹೊಡೆದೊಡಿಸಲು ಏಕಾದಶಿಯಂದು ತುಳಸಿ ಎಲೆಯಿಂದ ಹೀಗೆ ಮಾಡಿ

ಮಂಗಳವಾರ, 24 ಮಾರ್ಚ್ 2020 (07:09 IST)
ಬೆಂಗಳೂರು : ಮನೆಯಲ್ಲಿ ನಕರಾತ್ಮಕ ಶಕ್ತಿಗಳು ನೆಲೆಸಿದ್ದರೆ ಆ ಮನೆಯಲ್ಲಿ ಯಾವುದೇ ಶುಭಕಾರ್ಯ ನಡೆಯುವುದಿಲ್ಲ. ಶಾಂತಿ ನೆಮ್ಮದಿ ಇರುವುದಿಲ್ಲ. ಆದಕಾರಣ ಇಂತಹ  ನಕರಾತ್ಮಕ ಶಕ್ತಿಗಳನ್ನು ಹೊಡೆದೊಡಿಸಬೇಕೆಂದರೆ ಈ ಸರಳ ಪರಿಹಾರ ಮಾಡಿ.

ಏಕಾದಶಿಯಂದು  ವಿಷ್ಣುವಿನ ಸ್ವರೂಪವಿರುವ ದೇವರ ಫೋಟೊ ಮುಂದೆ ಒಂದು ಲೋಟದಲ್ಲಿ ಅರಶಿನ ಕುಂಕುಮ ಮಿಶ್ರಿತ ನೀರನ್ನು ಇಡಬೇಕು. ಅದಕ್ಕೆ ತುಳಸಿ ದಳ ಹಾಕಿ.  (ಆದರೆ ಏಕಾದಶಿಯನ್ನು ತುಳಸಿ ಎಲೆ ಕೀಳಬೇಡಿ. ಮೊದಲ ದಿನವೇ ತೆಗೆದಿಡಿ.) ಆಮೇಲೆ ನೈವೇದ್ಯ ಇಟ್ಟು ಹಳದಿ ಬಣ್ಣದ ಹೂಗಳಿಂದ ಪೂಜಿಸಿ. ಅದರಲ್ಲಿ ಒಂದು ಹೂವನ್ನು ತೆಗೆದುಕೊಂಡು ಅರಶಿನ ಕುಂಕುಮ ಮಿಶ್ರಿತ ನೀರಿಗೆ ಅದ್ದಿ ಇಡಿ ಮನೆಗೆ  ಹಾಗೂ ನಿಮ್ಮ ಮೇಲೆ ಪ್ರೋಕ್ಷಣೆ ಮಾಡಬೇಕು. ಇದರಿಂದ ಮನೆಯಲ್ಲಿರುವ ನಕರಾತ್ಮಕ ಶಕ್ತಿಗಳು ನಿವಾರಣೆಯಾಗಿ ಲಕ್ಷ್ಮೀದೇವಿ ನೆಲೆಸುತ್ತಾಳೆ.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ಪಂಚಾಂಗ ತಿಳಿಯಿರಿ