Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ಹಿನ್ನಲೆ; ಮದ್ಯ ಸಿಗದೆ ಕುಡುಕ ಆತ್ಮಹತ್ಯೆ

ಲಾಕ್ ಡೌನ್ ಹಿನ್ನಲೆ; ಮದ್ಯ ಸಿಗದೆ ಕುಡುಕ ಆತ್ಮಹತ್ಯೆ
ಚಿಕ್ಕೋಡಿ , ಗುರುವಾರ, 2 ಏಪ್ರಿಲ್ 2020 (10:03 IST)
ಚಿಕ್ಕೋಡಿ : ಲಾಕ್ ಡೌನ್ ಹಿನ್ನಲೆಯಲ್ಲಿ ಮದ್ಯ ಸಿಗದೆ ಕುಡುಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕೋಡಿ ತಾಲೂಕಿನ ಕೋಥಳಿ ಗ್ರಾಮದಲ್ಲಿ ನಡೆದಿದೆ.

ಈರಪ್ಪ ಬಡಿಗೇರಿ(44) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕೊರೊನಾ ಭೀತಿ ಹಿನ್ನಲೆಯಲ್ಲಿ ಇಡೀ ದೇಶವೇ ಲಾಕ್ ಡೌನ್ ಮಾಡಲಾಗಿದ್ದು, ಮದ್ಯದ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಬೇರಸಗೊಂಡ ಈತ ಮದ್ಯಕ್ಕಾಗಿ ಬೀದಿ ಬೀದಿ ಸುತ್ತುತ್ತಿದ್ದ ಈತ ಸೋಮವಾರದಂದು ನಾಪತ್ತೆಯಾಗಿದ್ದ.

 

ಆದರೆ ಬುಧವಾರದಂದು ಆತ ಶವವಾಗಿ ಗ್ರಾಮದ ಹೊರವಲಯದಲ್ಲಿರುವ ಬಾವಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಖಡಕಲಾಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

 


Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರು-ಕಾಸರಗೋಡು ರಸ್ತೆಯಲ್ಲಿ ಕರ್ನಾಟಕ ಹಾಕಿದ ಗಡಿ ದಿಗ್ಭಂಧ ತೆಗೆಸುವಂತೆ ಕೇಂದ್ರಕ್ಕೆ ಕೇರಳ ಹೈಕೋರ್ಟ್ ಆದೇಶ