Select Your Language

Notifications

webdunia
webdunia
webdunia
webdunia

40ರ ಮಹಿಳೆ ಜತೆ 20 ವರ್ಷದ ಹುಡುಗನ ಲವ್ವಿಡವ್ವಿ..!

Living relationship
ಬೆಂಗಳೂರು , ಶನಿವಾರ, 4 ನವೆಂಬರ್ 2017 (11:53 IST)
ಬೆಂಗಳೂರು: ನಲವತ್ತರ ಆಂಟಿಗಾಗಿ 20 ವರ್ಷದ ಹುಡುಗ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ತರುಣ್‌(21) ಆತ್ಮಹತ್ಯೆಗೆ ಯತ್ನಿಸಿರುವ ಯುವಕ. ಎಸ್ಎಸ್ಎಲ್ಸಿ ಫೇಲ್ ಆಗಿರುವ ತರುಣನಿಗೆ ಅಪ್ಪ-ಅಮ್ಮ ಇಲ್ಲ. ಜೆ.ಪಿ. ನಗರದ ಖಾಸಗಿ ಸ್ಕೂಲ್‌ ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡಿಕೊಂಡಿದ್ದ ಈತ ಹಾಗೂ ಆ ಶಾಲೆಯ ಪ್ರಿನ್ಸಿಪಾಲ್ ನಡುವೆ ಲವ್ವಿ ಡವ್ವಿ ಶುರುವಾಗಿತ್ತು. ಕಳೆದೊಂದು ವರ್ಷದಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಅಷ್ಟೇ ಅಲ್ಲದೆ ಇಬ್ಬರೂ ಕೂಡ 4 ತಿಂಗಳಿಂದ ಲಿವಿಂಗ್ ರಿಲೇಷನ್‌ ಶಿಪ್ ಇಟ್ಟುಕೊಂಡಿದ್ದರು ಎನ್ನಲಾಗಿದೆ.

ಆದರೆ ಒಂದೂವರೆ ತಿಂಗಳಿಂದ ಪ್ರಿನ್ಸಿಪಾಲ್ ತರುಣ್ ನನ್ನು ರಿಜೆಕ್ಟ್ ಮಾಡಿದ್ದಾರೆ. ಇದರಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ ಈತ, ನಾಲ್ಕೈದು ಬಾರಿ ಕೈ ಕೊಯ್ದುಕೊಂಡಿದ್ದ. ಇಷ್ಟಕ್ಕೆ ಸುಮ್ಮನಾಗದ ತರುಣ್ ನಿನ್ನೆ ಮತ್ತೆ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಸಮಾಜ ಏನೇ ಅಂದರೂ ಪ್ರಿನ್ಸಿಪಾಲ್ ನನಗೆ ಬೇಕು ಎಂದು ತರುಣ್‌ ಪಟ್ಟು ಹಿಡಿದಿದ್ದಾನೆ. ಆದರೆ ಈಗಾಗಲೇ ಪ್ರಿನ್ಸಿಪಾಲ್‌ ಗೆ ಮದುವೆಯಾಗಿ 20 ವರ್ಷದ ಮಗಳಿದ್ದಾಳೆ ಹಾಗೂ ಪತಿ ಕೇರಳದಲ್ಲಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ವಿರುದ್ಧ ಬಿಎಸ್ ವೈ ವಾಗ್ದಾಳಿ