Publish Date: Sun, 30 Jan 2022 (07:44 IST)
Updated Date: Sun, 30 Jan 2022 (09:49 IST)
ಚಿಕ್ಕಬಳ್ಳಾಪುರ : ಬಾವಿಗೆ ಬಿದ್ದ ಮೊಬೈಲ್ ಫೋನ್ ತೆಗೆದುಕೊಳ್ಳಲು ಬಾವಿಗೆ ಇಳಿದ ಯುವಕ ಪ್ರಾಣ ಕಳೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗುಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅನಿಲ್ ಕುಮಾರ್(35) ಮೃತ ಯುವಕ. 3 ಅಡಿ 60 ಅಡಿ ಆಳ್ ಕಿರು ಬಾವಿಯೊಳಗೆ ಆಕಸ್ಮಿಕ ಮೊಬೈಲ್ ಫೋನ್ ಜಾರಿಬಿದ್ದಿದ್ದು, ಮೊಬೈಲ್ ಫೋನ್ಗಾಗಿ ಅನಿಲ್ ಕುಮಾರ್ ಹಗ್ಗ ಕಟ್ಟಿಕೊಂಡು ಬಾವಿಗೆ ಇಳಿದಿದ್ದಾನೆ.
ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಎನ್ಡಿಆರ್ಎಫ್ ಸಿಬ್ಬಂದಿ ಆಕ್ಸಿಜನ್ ಬಿಟ್ಟು ಬದುಕಿಸುವ ಪ್ರಯತ್ನಗಳನ್ನು ಮಾಡಿದರೂ ಫಲಪ್ರದವಾಗಿಲ್ಲ. ಸಾಕಷ್ಟು ಹರಸಾಹಸ ಪಟ್ಟು ಅನಿಲ್ ಮೇಲೆಕ್ಕೆ ಎತ್ತಿದಾಗ ಮೃತಪಟ್ಟಿದ್ದಾನೆ.
ಇದೀಗ ಅನಿಲ್ ಮೃತ ದೇಹವನ್ನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.