Webdunia - Bharat's app for daily news and videos

Install App

ಇವಳೆಂತಹ ಹೆಣ್ಣು: ಗಂಡ ಮತ್ತು ಗೆಳೆಯನೊಂದಿಗೆ ಒಂದೇ ಮನೆಯಲ್ಲಿ ಸಂಸಾರ

Webdunia
ಮಂಗಳವಾರ, 7 ನವೆಂಬರ್ 2023 (17:34 IST)
ಹತ್ಯೆಯಾದ 31 ವರ್ಷ ವಯಸ್ಸಿನ ಸೋನಾಲಿ ಚೌಹಾನ್ ಮತ್ತು ಆಕೆಯ 12 ವರ್ಷ ವಯಸ್ಸಿನ ಪುತ್ರ ಕುನಾಲ್ ರಕ್ತದ ಮಡುವಿನಲ್ಲಿ ಬಿದ್ದಿರುವ ಬಗ್ಗೆ ಆರೋಪಿ ,ಬಾಯ್‌ಫ್ರೆಂಡ್ ಕಿರಣ್ ಮಕ್ವಾನಾ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮಕ್ವಾನಾ ಮತ್ತು ಸೋನಾಲಿ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ವಾಸಿಸುತ್ತಿದ್ದರು. ಸೋನಾಲಿ ಪತಿ 29 ವರ್ಷ ವಯಸ್ಸಿನ ರಾಜ್‌ಕುಮಾರ್ ಚೌಹಾನ್ ರೆಡಿಯೋಲಾಜಿಸ್ಟ್ ವೃತ್ತಿಯಲ್ಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  
 
ವಿಚಿತ್ರ ಪ್ರಕರಣವೊಂದರಲ್ಲಿ 38 ವರ್ಷ ವಯಸ್ಸಿನ ಪ್ರಿಯಕರನೊಬ್ಬ, ಮಹಿಳೆ ಮತ್ತು ಆಕೆಯ ಪುತ್ರನನ್ನು ಹತ್ಯೆ ಮಾಡಿ (ನಲಾಸೋಪರಾ ಪೂರ್ವ) ಪೊಲೀಸ್ ಚೌಕಿ ಠಾಣೆಗೆ ಶರಣಾದ ಘಟನೆ ವರದಿಯಾಗಿದೆ.
 
ಕಾರ್ನಿವಾಲ್ ಸಿನೆಮಾ ಹಿಂದಿರುವ ವಾಸೈ ಪೂರ್ವದಲ್ಲಿದ್ದ  ಸಾಯಿ ಲೀಲಾ ಅಪಾರ್ಟ್‌ಮೆಂಟ್‌‌ನಲ್ಲಿರುವ ಹೌಸಿಂಗ್ ಕಾಂಪ್ಲೆಕ್ಸ್‌‌ನಲ್ಲಿ ಘಟನೆ ನಡೆದಿದ್ದು, ಅದೇ ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆ ತನ್ನ ಬಾಯ್‌ಫ್ರೆಂಡ್, ಪತಿ ಮತ್ತು ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ.
 
ಹತ್ಯೆಯಾದ ಸೋನಾಲಿ ತಡರಾತ್ರಿ ಮನೆಗೆ ಬಂದಾಗ ಕಾರಣ ಕೇಳಿದ ಬಾಯ್‌ಫ್ರೆಂಡ್ ಮಕ್ವಾನಾ, ಕೋಪದ ಭರದಲ್ಲಿ ಚಾಕುವಿನಿಂದ ಆಕೆಯ ಮೇಲೆ ದಾಳಿ ಮಾಡಿ ಹತ್ಯೆಗೈದಿದ್ದಾನೆ. ನಂತರ ಅದನ್ನು ತಡೆಯಲು ಬಂದ ಆಕೆಯ ಪುತ್ರ ಕುನಾಲ್‌ನನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಆರೋಪಿ ಕಿರನ್ ಮಕ್ವಾನಾ ವಿರುದ್ಧ ಜೋಡಿ ಹತ್ಯೆ ಪ್ರಕರಣ ದಾಖಲಿಸಲಾಗಿದ್ದು, ಹತ್ಯೆಯಾದ ಮಹಿಳೆಯ ಪತಿ ಮತ್ತು ಆಕೆಯ ಮಕ್ಕಳ ಹೇಳಿಕೆ ಕೂಡಾ ಪಡೆಯಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಕೃಷ್ಣ ಕೋಕಾಟೆ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಟಿಗೆ ಹೊಟೇಲ್‌ಗೆ ಆಹ್ವಾನಿಸಿ, ಅಶ್ಲೀಲ ಸಂದೇಶ ಆರೋಪ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಮಮ್ಕೂಟತಿಲ್ ನಡೆಗೆ ಬಿಗ್ ಶಾಕ್‌

ನಮಗೆ ಪೇ ಸಿಎಂ ಎಂದ್ರು, ಈಗ ಕಾಂಗ್ರೆಸ್ ನದ್ದು ಇನ್ನೇನು: ಬಿವೈ ವಿಜಯೇಂದ್ರ

ರಾಹುಲ್ ಗಾಂಧಿಯಿದ್ದ ವಾಹನ ಕಾನ್‌ಸ್ಟೇಬಲ್‌ಗೆ ಡಿಕ್ಕಿ, ಯಾರ ಮೇಲೆ ಬಿತ್ತು ಕೇಸ್‌ ಗೊತ್ತಾ

Viral Video: ದುರಾದೃಷ್ಟಕ್ಕೆ ನಾನು ಸಂಸದ ಎಂದ ರಾಹುಲ್ ಗಾಂಧಿ: ತಿದ್ದಿದ ಜೈರಾಮ್ ರಮೇಶ್

ಮಹೇಶ್ ಶೆಟ್ಟಿ ತಿಮರೋಡಿ ಬಳಿಕ ಯೂಟ್ಯೂಬರ್ ಸಮೀರ್ ಮನೆಗೆ ಬಂದ ಪೊಲೀಸರು

ಮುಂದಿನ ಸುದ್ದಿ
Show comments