Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಂಜೆ ಅನೌನ್ಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಂಜೆ ಅನೌನ್ಸ್
ಬೆಂಗಳೂರು , ಶುಕ್ರವಾರ, 22 ಮಾರ್ಚ್ 2019 (11:43 IST)
ಬಿಜೆಪಿ ತನ್ನ ಹುರಿಯಾಳುಗಳನ್ನು ಪ್ರಕಟಿಸಿದ ಬೆನ್ನಲ್ಲೇ ಮೈಕೊಡವಿ ಎದ್ದಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಇಂದು ಸಂಜೆ ಘೋಷಣೆ ಮಾಡಲಿದೆ.

ಕಾಂಗ್ರೆಸ್ ಮುಖಂಡರು ನಿನ್ನೆ ನಡೆಸಿದ ಸಭೆಯಲ್ಲಿ ಜಾತಿ ಲೆಕ್ಕಾಚಾರದ್ದೇ ಸದ್ದು ಜೋರಾಗಿತ್ತಂತೆ. ಲಿಂಗಾಯತ, ಕುರುಬ, ಅಲ್ಪಸಂಖ್ಯಾತರ ವಿಚಾರದಲ್ಲಿ ಜಾತಿ ಲೆಕ್ಕಾಚಾರ ಗಣನೆಗೆ ತೆಗೆದುಕೊಂಡು ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ.

ರಾಜ್ಯದಲ್ಲಿ ಮೈತ್ರಿ ಪಕ್ಷಗಳ ಧರ್ಮದ ಪ್ರಕಾರ ಇರುವ 20 ಕ್ಷೇತ್ರಗಳಲ್ಲಿ ಎರಡು ಎಸ್ ಟಿ, ಮೂರು ಎಸ್ಸಿ, ಎರಡು ಕುರುಬ, ಎರಡು ಮುಸ್ಲಿಂ, ಎರಡು ಒಕ್ಕಲಿಗ, ಆರು ಲಿಂಗಾಯತ, ಎರಡು ಹಿಂದುಳಿದ ಜಾತಿಗೆ ಟಿಕೆಟ್ ಕೊಡಬೇಕು ಎಂಬುದರ ಕುರಿತು ಸ್ಕ್ರೀನಿಂಗ್ ಕಮಿಟಿಯಲ್ಲಿ ಬಿಸಿ ಬಿಸಿ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿ, ಬೀದರ್,ಬಾಗಲಕೋಟೆ, ದಾವಣಗೆರೆ, ಧಾರವಾಡ, ಚಿಕ್ಕೋಡಿ ಲಿಂಗಾಯತ

ಮೈಸೂರು ಮತ್ತು ಹಾವೇರಿ/ಕೊಪ್ಪಳ ಕುರುಬ

ಬೆಂಗಳೂರು ಗ್ರಾಮಾಂತರ ಮತ್ತು ದಕ್ಷಿಣ ಒಕ್ಕಲಿಗ

ಚಾಮರಾಜನಗರ, ಕೋಲಾರ, ಗುಲ್ಬರ್ಗ, ಚಿತ್ರದುರ್ಗ ಎಸ್ ಸಿ

ಬಳ್ಳಾರಿ ಮತ್ತು ರಾಯಚೂರು ಎಸ್ಟಿಗೆ

ಚಿಕ್ಕಬಳ್ಳಾಪುರ ಮತ್ತು ಮಂಗಳೂರು ಹಿಂದುಳಿದವರು

ಬೆಂಗಳೂರು ಕೇಂದ್ರ ಮತ್ತು ಹಾವೇರಿ ಮುಸ್ಲಿಂ

ಬಿಜೆಪಿ ಪಟ್ಟಿ ಬಿಡುಗಡೆ ಬೆನ್ನಲ್ಲೇ ರಾಜ್ಯ ಕೈ ನಾಯಕರು ಬಿಜೆಪಿ ಅಭ್ಯರ್ಥಿ ವಿರುದ್ಧ ಅಳೆದು ತೋಗಿ ಅಭ್ಯರ್ಥಿ ಹಾಕಲು   ಹರಸಹಾಸ ಮುಂದುವರಿಸಿದ್ದಾರೆ. ಅಭ್ಯರ್ಥಿಗಳ ಸಾಮರ್ಥ್ಯದ ಬಗ್ಗೆ ನಾಯಕರಲ್ಲಿ ದೊಡ್ಡ ಚಿಂತೆ ಹಾಗೂ ಪ್ರಶ್ನೆಗಳು ಇವೆ.
ಬೆಳಗಾವಿಯಲ್ಲಿ
ಶಿಶಿಕಾಂತ ಸಿದ್ನಳ್, ಸಾದನ್ನನವರ್

ಧಾರವಾಡ - ವಿನಯ್ ಕುಲಕರ್ಣಿ 
ಚಿಕ್ಕೋಡಿ - ಪ್ರಕಾಶ್ ಹುಕ್ಕೇರಿ
ಬೀದರ್ - ಈಶ್ವರ್ ಖಂಡ್ರೆ
ಹಾವೇರಿ - ಡಿ.ಆರ್. ಪಾಟೀಲ್
ಬಾಗಲಕೋಟೆ - ವೀಣಾ ಕಾಶಪ್ಪನವರ್
ದಾವಣಗೆರೆ – ಎಸ್. ಎಸ್. ಮಲ್ಲಿಕಾರ್ಜುನ

ದಕ್ಷಿಣ ಕನ್ನಡ - ರಮನಾಥ್ ರೈ - ಐವನ್ ಡಿಸೋಜ

ಚಿಕ್ಕಬಳ್ಳಾಪುರ - ವೀರಪ್ಪ ಮೊಯಿಲಿ
ಬೆಂಗಳೂರು ಗ್ರಾಮಾಂತರ – ಡಿ.ಕೆ. ಸುರೇಶ್
ಬೆಂಗಳೂರು ದಕ್ಷಿಣ - ಗೋವಿಂದ ರಾಜು
ಬೆಂಗಳೂರು ಕೇಂದ್ರ - ರಿಜ್ವಾನ್ ಅರ್ಷದ್/ ಬಿ.ಕೆ. ಹರಿಪ್ರಸಾದ್

ಗುಲ್ಬರ್ಗ - ಮಲ್ಲಿಕಾರ್ಜುನ ಖರ್ಗೆ
ಕೋಲಾರ - ಮುನಿಯಪ್ಪ
ಚಾಮರಾಜನಗರ - ದ್ರುವನಾರಾಯಣ
ಚಿತ್ರದುರ್ಗ - ಚಂದ್ರಪ್ಪ

ಕೊಪ್ಪಳ - ರಾಜಶೇಖರ್ ಹಿಟ್ನಾಲ್
ಮೈಸೂರು-  ವಿಜಯ ಶಂಕರ್

 
ಬಳ್ಳಾರಿ – ವಿ.ಎಸ್. ಉಗ್ರಪ್ಪ
ರಾಯಚೂರು – ಬಿ.ವಿ. ನಾಯಕ್

ಇಂದಿನ ಸಿಇಸಿ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಂಡು ಪಟ್ಟಿಯನ್ನು ಕೈ ಹೈಕಮಾಂಡ್ ಪ್ರಕಟಿಸಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ದಾರುಣ ಸಾವು