Select Your Language

Notifications

webdunia
webdunia
webdunia
webdunia

ಶಿಯೋಮಿ ತನ್ನ ಗ್ರಾಹಕರಿಗಾಗಿ ಬಿಡುಗಡೆ ಮಾಡಿದೆ ಮಿ ಪೇ ಮನಿ ಆಪ್

ಶಿಯೋಮಿ ತನ್ನ ಗ್ರಾಹಕರಿಗಾಗಿ ಬಿಡುಗಡೆ ಮಾಡಿದೆ ಮಿ ಪೇ ಮನಿ ಆಪ್
ನವದೆಹಲಿ , ಬುಧವಾರ, 20 ಮಾರ್ಚ್ 2019 (09:29 IST)
ನವದೆಹಲಿ : ಪೇಟಿಎಂ ಸೇರಿದಂತೆ ಸದ್ಯ ಮಾರುಕಟ್ಟೆಯಲ್ಲಿರುವ ಮನಿ ಆಪ್ ಗಳಿಗೆ ಟಕ್ಕರ್ ನೀಡಲು ಶಿಯೋಮಿ ಮಿ ಪೇ ಮನಿ ಆಪ್ ಬಿಡುಗಡೆ ಮಾಡಿದೆ.

ಚೀನಾ ನಂತರ ಭಾರತದಲ್ಲಿ ಬಿಡುಗಡೆಯಾದ ಮಿ ಪೇ ಆಪ್  ಗೂಗಲ್ ಪೇಯಂತೆಯೇ ಕೆಲಸ ಮಾಡಲಿದ್ದು, ಫೋನ್ ನಂಬರ್ ಮೂಲಕ ಖಾತೆ ವಿವರವನ್ನು ಪಡೆಯಬಹುದಾಗಿದೆ. ಮಿ ಪೇ ಬಳಕೆದಾರರಿಗೆ ಕಂಪನಿ ಹೊಸ ಹೊಸ ಆಫರ್ ಗಳನ್ನು ಕೂಡ ನೀಡಲಿದೆ. ಗ್ರಾಹಕರು MIUI ಅಪ್ ಡೇಟ್ ಮಾಡಿದಾಗ ಮಿ ಪೇ ನಿಮಗೆ ಸಿಗಲಿದೆ. ಇದನ್ನು ಗೂಗಲ್ ಸ್ಟೋರ್ ನಿಂದ ಡೌನ್ಲೋಡ್ ಮಾಡಲು ಸಾಧ್ಯವಿಲ್ಲ. ಶಿಯೋಮಿ ಮೊಬೈಲ್ ಹೊಂದಿದವರಿಗೆ ಮಾತ್ರ ಈ ಆಪ್ ಸಿಗಲಿದೆ.

 

ಇದಕ್ಕೆ ಕ್ಯೂ ಆರ್ ಕೋಡ್ ಕೂಡ ನೀಡಲಾಗಿದೆ. ಇದನ್ನು ಸ್ಕ್ಯಾನ್ ಮಾಡಿ ಹಣವನ್ನು ವರ್ಗ ಮಾಡಬಹುದು. ಹಣಕ್ಕೆ ವಿನಂತಿ ಕೂಡ ಮಾಡಬಹುದು. ಕಂಪನಿ ಪ್ರಕಾರ ಎಸ್‌ಎಂಎಸ್ ಮೂಲಕ ಇದನ್ನು ಬಳಸಬಹುದಂತೆ. ಶಿಯೋಮಿ ಸ್ಮಾರ್ಟ್ಫೋನ್ ನಿಮ್ಮ ಬಳಿಯಿದ್ದರೆ ನೀವು ಕಂಪನಿಗೆ ಎಸ್‌ಎಂಎಸ್ ಕಳುಹಿಸಿ, ಮಿ ಪೇ ಸೌಲಭ್ಯ ಪಡೆಯಬಹುದು. ಮೊಬೈಲ್ ರಿಚಾರ್ಜ್, ಕರೆಂಟ್ ಬಿಲ್, ನೀರಿನ ಬಿಲ್ ಸೇರಿದಂತೆ ಎಲ್ಲ ಬಿಲ್ ಗಳನ್ನು ಇದ್ರಲ್ಲಿ ಪಾವತಿ ಮಾಡಬಹುದು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಸೆಕ್ಸ್ ಮಾಡಲು ಬಯಸುತ್ತಾಳೆ. ಏನು ಮಾಡಲಿ?