Select Your Language

Notifications

webdunia
webdunia
webdunia
webdunia

ಮತ್ತೆ ಮೇಯರ್ ಚುನಾವಣೆ ಮುಂದೂಡುವ ಸಾಧ್ಯತೆ

ಮತ್ತೆ ಮೇಯರ್ ಚುನಾವಣೆ ಮುಂದೂಡುವ ಸಾಧ್ಯತೆ
ಬೆಂಗಳೂರು , ಸೋಮವಾರ, 30 ಸೆಪ್ಟಂಬರ್ 2019 (11:08 IST)
ಬೆಂಗಳೂರು : ಈಗಾಗಲೇ ಬಿಬಿಎಂಪಿ ಮೇಯರ್ ಚುನಾವಣೆಯನ್ನು ಮುಂದೂಡುತ್ತಾ ಬಂದ ಸರ್ಕಾರ ಇದೀಗ ಮತ್ತೆ ಮೇಯರ್ ಚುನಾವಣೆ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗಿದೆ.



ನಾಳೆ ಮೇಯರ್ –ಉಪಮೇಯರ್ ಚುನಾವಣೆ ನಡೆಯಬೇಕಿತ್ತು. ಆದರೆ  ಎಲೆಕ್ಷನ್ ಮುಂದೂಡಲು ಬಿಜೆಪಿ ನಾಯಕರು ಹುನ್ನಾರ ಮಾಡಿದ್ದು ಚುನಾವಣೆ ಮುಂದೂಡುವ ಬಗ್ಗೆ ಸಿಎಂ ಕಚೇರಿಗೆ ಫೈಲ್ ರವಾನಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

 

ನಗರಾಭಿವೃದ್ಧಿ ಇಲಾಖೆಯಿಂದ ಸಿಎಂ ಕಚೇರಿಗೆ ಫೈಲ್ ರವಾನೆಯಾಗಿರುವುದಾಗಿ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಮಣರೆಡ್ಡಿ ಮಾಹಿತಿ ನೀಡಿದ್ದಾರೆ.ಇದೀಗ ಸಿಎಂ ಕಚೇರಿಯಿಂದ ಬರುವ ಆದೇಶದ ಮೇಲೆ ನಿರ್ಧಾರ ಮಾಡಲಾಗುವುದು ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂರವರ ತಂತಿ ಮೇಲಿನ ನಡಿಗೆ ಹೇಳಿಕೆಗೆ ಶಾಸಕ ರಾಮದಾಸ್ ಹೇಳಿದ್ದೇನು?