Select Your Language

Notifications

webdunia
webdunia
webdunia
webdunia

ಕನಸಿನಂತೆ ಮೂರು ತಿಂಗಳ ಹಿಂದೆ ಸೇನೆ ಸೇರಿದ ಯೋಧ ಹಠಾತ್ ಹೃದಯಾಘಾತದಲ್ಲಿ ಸಾವು

ಬಾಗಲಕೋಟೆ ಸೈನಿಕ

Sampriya

ಬಾಗಲಕೋಟೆ , ಗುರುವಾರ, 29 ಮೇ 2025 (17:58 IST)
Photo Credit X
ಬಾಗಲಕೋಟೆ: ಈಚೆಗೆ ತನ್ನ ಕನಸಿನಂತೆ ಸೇನೆಗೆ ಸೇರಿಕೊಂಡ ಬಾಗಲಕೋಟೆಯ ಯೋಧರೊಬ್ಬರು  ಛತ್ತೀಸ್‌ಗಢದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಬಾಗಲಕೋಟೆ  ಜಿಲ್ಲೆಯ ಬಾದಾಮಿ ತಾಲೂಕಿನ ಚಿಂಚಲಕಟ್ಟಿ ತಾಂಡಾ ಗ್ರಾಮದ ಉಪೇಂದ್ರ ಸೋಮನಾಥ ರಾಥೋಡ್(24) ಮೂರು ತಿಂಗಳ ಹಿಂದೆ ಅಸ್ಸಾಂ ರೈಫಲ್ಸ್‌ ಸೇರಿದ್ದರು.

ಛತ್ತೀಸ್‌ಗಢದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾಗ ತರಬೇತಿಯಲ್ಲಿದ್ದಾಗ ಸೋಮನಾಥ ರಾಥೋಡ್ ಅವರಿಗೆ ಹೃದಯಾಘಾತವಾಗಿದೆ.

ಮೃತ ಯೋಧನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಪಾರ್ಥಿವ ಶರೀರ ಶುಕ್ರವಾರ ಮಧ್ಯಾಹ್ನ ತಾಲೂಕಿಗೆ ಬರಲಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿರುವ ಕಮಲ್ ಹಾಸನ್ ಸಿನಿಮಾಗೆ ನಿಷೇಧ ಹೇರಬೇಕು: ಜೆಡಿಎಸ್‌