Select Your Language

Notifications

webdunia
webdunia
webdunia
webdunia

ಅಬಕಾರಿ ಇಲಾಖೆಯ ಮಿಂಚಿನ ಕಾರ್ಯಾಚರಣೆ

arrest

geetha

bangalore , ಮಂಗಳವಾರ, 23 ಜನವರಿ 2024 (17:53 IST)
ಬೆಂಗಳೂರು-ಅಬಕಾರಿ ಇಲಾಖೆಯಿಂದ ಕೆ.ಆರ್.ಪುರ ಹಾಗೂ ಮಹದೇವಪುರ ವಲಯದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.ಗೋವಾದಿಂದ , ಅಕ್ರಮವಾಗಿ ನಗರಕ್ಕೆ ಸರಬರಾಜು ಮಾಡುತ್ತಿದ್ದ ಕಂಟೈನರ್ ವಾಹನ ಜಪ್ತಿ ಮಾಡಿದ್ದಾರೆ.ಬರೋಬ್ಬರಿ 50 ಲಕ್ಷ ಮೌಲ್ಯದ ಮದ್ಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.ಕಂಟೈನರ್ ವಾಹನದ ಮೇಲೆ ಮದ್ಯವಿರುವ ನೂರಾರು ಬಾಕ್ಸ್ ಗಳನ್ನ ಇಟ್ಟು ಟಾರ್ಪಲ್ ಹಾಕಿದ್ರು.

ಗೋವಾದಿಂದ ನಗರಕ್ಕೆ ಬರುವ ಯಾವ ಚೆಕ್ ಪೋಸ್ಟ್ ಗಳಿಗೂ ಸಿಕ್ಕಿ ಹಾಕಿಕೊಳ್ಳದೆ ಕಳ್ಳಾಟ ಮೆರೆದಿದ್ರು.ಖಚಿತ ಮಾಹಿತಿ ಮೇರೆಗೆ ಕೆ.ಆರ್‌.ಪುರ ಬಳಿ ವಾಹನ ಅಧಿಕಾರಿಗಳು ತಡೆದಿದ್ದಾರೆ.ಹೊಸಕೋಟೆಗೆ ಮದ್ಯವಿರುವ ವಾಹನ ಸಾಗಾಟ ಮಾಡುತಿದ್ದರು.ಸದ್ಯ ಚಾಲಕ ಅಮಿತ್ ಹಾಗೂ ಪರಮೇಶ್ ಇಬ್ಬರನ್ನ  ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.ಮೇಲ್ನೋಟಕ್ಕೆ ನಕಲಿ ಮದ್ಯ ಎಂಬುದು ಪತ್ತೆಯಾಗಿದ್ದು.ಅಧಿಕಾರಿಗಳಿಂದ ತನಿಖೆ ಮುಂದುವರೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಕಾರ್ಯಕರ್ತರ ವರ್ತನೆ ಖಂಡಿಸಿ ಕಾಂಗ್ರೆಸ್ ಧರಣಿ