ಉತ್ತರಪ್ರದೇಶದ ಸಿಎಂ ಯೋಗಿ​ಗೆ ಜೀವ ಬೆದರಿಕೆ..!

Webdunia
ಭಾನುವಾರ, 21 ಆಗಸ್ಟ್ 2022 (21:41 IST)
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ದೇಶದೆಲ್ಲೆಡೆ ಬಿಜೆಪಿ ಕಾರ್ಯಕರ್ತರು ಮತ್ತು ಹಿಂದುತ್ವ ಪರ ಹೋರಾಟಗಾರರು ಆದರ್ಶ ಎಂದು ಭಾವಿಸುತ್ತಾರೆ. ಕರ್ನಾಟಕದಲ್ಲಿಯೂ ಕರಾವಳಿಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಯಾದ ನಂತರದ ಪ್ರತಿಭಟನಾ ಮೆರವಣಿಗೆಯಲ್ಲಿ ‘ಯೋಗಿ, ಯೋಗಿ’ ಎಂದು ಘೋಷಣೆ ಕೂಗಿದ್ದರು.ಯೋಗಿ ಆದಿತ್ಯನಾಥ್ ಅವರ ವ್ಯಕ್ತಿತ್ವ ಹಾಗೂ ಆಡಳಿತ ವೈಖರಿಗೆ ಹಿಂದುತ್ವವಾದಿಗಳ ಮೆಚ್ಚುಗೆ ಇರುವುದನ್ನು ಈ ಬೆಳವಣಿಗೆಗಳು ಸಾರಿ ಹೇಳಿದ್ದವು.ಇದೀಗ ಉತ್ತರ ಪ್ರದೇಶದ ನಾಗರಿಕ ಆತ್ಮಪ್ರಕಾಶ್​ ಪಂಡಿತ್ ಎಂಬಾತನ ಫೇಸ್​ಬುಕ್ ಖಾತೆಯಲ್ಲಿ ಪ್ರಕಟವಾಗಿರುವ ಪೋಸ್ಟ್ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದೆ. ಈ ಪೋಸ್ಟ್​ನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಶಿರಚ್ಛೇದದ ಬೆದರಿಕೆ ಹಾಕಲಾಗಿದೆ. ‘ತನ್ನ ಫೇಸ್​ಬುಕ್ ಖಾತೆ ದುರ್ಬಳಕೆ ಆಗಿದೆ’ ಎಂದು ತನಿಖೆ ವೇಳೆ ಅವರು ಸೈಬರ್​ ​ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೈಬರ್ ಠಾಣೆ ಪೊಲೀಸರು ಪ್ರಕರಣ ದಾಖಲಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಹಬ್ಬಕ್ಕೆ ದಿನಗಣನೆ: ಪಟಾಕಿ ದುರಂತ ತಡೆಗೆ ಪೊಲೀಸ್ ಆಯುಕ್ತರ ಕಟ್ಟುನಿಟ್ಟಿನ ಸೂಚನೆ

ಒಡಿಶಾ: ಬಿಜೆಪಿ ಮುಖಂಡ ಪಿತಾಬಾಷ್ ಪಾಂಡಾ ಬರ್ಹಾಂಪುರದಲ್ಲಿ ಗುಂಡಿಕ್ಕಿ ಹತ್ಯೆ

ಬುರುಡೆ ಗ್ಯಾಂಗ್ ಜತೆಗಿನ ನಂಟಿನ ಬಗ್ಗೆ ಸುಜಾತಾ ಭಟ್ ಸ್ಫೋಟಕ ಹೇಳಿಕೆ

ಸಿಜೆಐ ಮೇಲೆ ಶೂ ಎಸೆದ ಪ್ರಕರಣ; ವಕೀಲರ ಪ್ರತಿಕ್ರಿಯೆ ಕೇಳಿದ್ರೆ ಶಾಕ್

Karnataka Weather: ಮುಂದಿನ ಎರಡು ದಿನ ಈ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ

ಮುಂದಿನ ಸುದ್ದಿ
Show comments