Select Your Language

Notifications

webdunia
webdunia
webdunia
webdunia

ಪಂಚಮಸಾಲಿ ಸಮಾಜಕ್ಕೆ DCM ಸ್ಥಾನ ನೀಡಲಿ-ಬಸವ‌ ಜಯಮೃತ್ಯುಂಜಯ ಶ್ರೀ

pancha masali society
ವಿಜಯಪುರ , ಬುಧವಾರ, 20 ಸೆಪ್ಟಂಬರ್ 2023 (18:02 IST)
ಲಿಂಗಾಯತ ಸಮಾಜಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ವಿಚಾರಕ್ಕೆ ವಿಜಯಪುರದಲ್ಲಿ ಕೂಡಲಸಂಗಮದ ಬಸವ‌ ಜಯಮೃತ್ಯುಂಜಯ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಪಕ್ಷ ಉಪ ಮುಖ್ಯಮಂತ್ರಿ ಸ್ಥಾನ ನೀಡಿದರೆ ಪಂಚಮಸಾಲಿ ಸಮಾಜಕ್ಕೆ ನೀಡಲಿ, ನಮ್ಮ ಸಮಾಜದ 11 ಶಾಸಕರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಲಿಂಗಾಯತರಿಗೆ ನೀಡುವುದಾದರೆ ಪಂಚಮಸಾಲಿ ಸಮಾಜಕ್ಕೆ ನೀಡಲಿ ಎಂದ್ರು. ಈ ಮೂಲಕ ಪಂಚಮಸಾಲಿ ಸಮಾಜಕ್ಕೆ ‌ಡಿಸಿಎಂ ಸ್ಥಾನದ ಬೇಡಿಕೆಯಿಟ್ಟಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ‌ವಿರೋಧ ಪಕ್ಷದ ನಾಯಕನಾಗಬೇಕು ಎಂದು ಜನ ಬಯಸಿದ್ದಾರೆ. ಬಿಜೆಪಿ ಹೈಕಮಾಂಡ್ ಇದನ್ನು ಗಮನಿಸಲಿ ಎಂದು ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀರು ಬಿಟ್ಟಿಲ್ಲವೆಂದು ಸರ್ಕಾರದ ಕಳ್ಳಾಟ