Select Your Language

Notifications

webdunia
webdunia
webdunia
webdunia

ನೀರಿಲ್ಲ ಅಂತಾ ನಿವೇದಿಸಿಕೊಂಡಿದ್ದೇವೆ-ಸಿಎಂ ಸಿದ್ದರಾಮಯ್ಯ

water
bangalore , ಬುಧವಾರ, 20 ಸೆಪ್ಟಂಬರ್ 2023 (16:21 IST)
ನಾವು ನಿರೀಕ್ಷೆ ಮಾಡಿದಷ್ಟು ಮಳೆ ಬರುವುದಿಲ್ಲ.. ಈ ಹಿನ್ನೆಲೆ ನೀರಿನ ಕೊರತೆ ಎದುರಾಗಿದೆ. ನಮಗೆ 107 TMC ನೀರು ಅವಶ್ಯಕತೆಯಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ರು. ದೆಹಲಿಯಲ್ಲಿ ಕಾವೇರಿ ಸಭೆ ಬಳಿಕ ಪ್ರತಿಕ್ರಿಯಿಸಿದ್ರು. CWMA ಮತ್ತು CWRC ಸಮಿತಿ ಮುಂದೆ ನೀರಿಲ್ಲ ಅಂತಾ ನಿವೇದನೆ ಮಾಡಿದ್ದೇವೆ.. ತಮಿಳುನಾಡು 24 ಸಾವಿರ ಕ್ಯೂಸೆಕ್ ನೀರಿನ ಬೇಡಿಕೆ ಇಟ್ಟಿದೆ.. ಮೊದಲು 10 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶ ನೀಡಿತ್ತು.. ನಾವು ಇದ್ದ ನೀರಿನಲ್ಲಿ ಅಲ್ಪ ನೀರು ಕೊಟ್ಟಿದ್ದೇವೆ. ಹಾಗಾಗಿ ತಮಿಳುನಾಡು ಸುಪ್ರೀಂಕೋರ್ಟ್ ಮೇಟ್ಟಿಲೇರಿದೆ. ಸುಪ್ರೀಂಕೋರ್ಟ್​ನಲ್ಲಿ ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ ಎಂದು ತಿಳಿಸಿದ್ರು. ತಮಿಳುನಾಡು ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಅಂತಾ ಮನವಿ ಮಾಡಲಾಗಿದೆ.. ಆದ್ರೂ CWMA ಮತ್ತೆ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶಿಸಿದೆ.. ಈಗ ಮತ್ತೆ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸುತ್ತೇವೆ.. ಹಾಲಿ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಸಾಧ್ಯವಿಲ್ಲ ಅಂತಾ ಅರ್ಜಿ ಹಾಕುತ್ತೇವೆ ಎಂದು ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಕುಡಿಯುವ ನೀರಿಗಾಗಿ ಜೈಲಿಗೆ ಹೋಗೋಣ, ನಿಮ್ಮೊಂದಿಗೆ ನಾವಿದ್ದೇವೆ: ರಾಜ್ಯ ಸರ್ಕಾರಕ್ಕೆ ಮು.ಚಂದ್ರು ಕರೆ