Select Your Language

Notifications

webdunia
webdunia
webdunia
webdunia

ಕಾವೇರಿ ನೀರು ಬಿಟ್ಟ ಬಳಿಕ ಸಭೆ ಕರೆದಿದ್ದಾರೆ

Cauvery water
dehali , ಬುಧವಾರ, 20 ಸೆಪ್ಟಂಬರ್ 2023 (17:00 IST)
ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಇಂದು ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಸದರ, ಕಾನೂನು ತಜ್ಞರ ಸಭೆ ನಡೆಸಲಾಗಿದೆ. ಈ ಸಭೆಗೂ ಮುನ್ನ ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಕಾವೇರಿ ನೀರು ಬಿಟ್ಟ ಬಳಿಕ ಸಭೆ ಕರೆದಿದ್ದಾರೆ. ನೀರು ಬಿಡುವ ಮುನ್ನ ಸಭೆ ಕರೆದು ಚರ್ಚೆ ನಡೆಸಬೇಕಿತ್ತು ಅಂತಾ ಹೇಳಿದ್ದಾರೆ.. ರಾಜಕೀಯ ಹಿತಾಸಕ್ತಿಗಾಗಿ ನೀರು ಹರಿಸಿದ್ದೀರಿ. ಇಂಡಿಯಾ ಒಕ್ಕೂಟದ ಬೆಂಬಲದ ಹಿತ ಸರ್ಕಾರಕ್ಕೆ ಮುಖ್ಯವಾಗಿದೆ. CWMA ಮತ್ತು CWRCಗೆ 2,500 ಕ್ಯೂಸೆಕ್ ನೀರು ಬಿಡಲು ಸಾಧ್ಯವಿದೆ ಅಂತಾ ಹೇಳ್ತಾರೆ. ಹಾಗಾಗಿ ಎರಡು ಸಮಿತಿಗಳು ನೀರು ಬಿಡಲು ಆದೇಶ ನೀಡಿವೆ. ರಾಜಕೀಯ ಪ್ರೇರಿತವಾಗಿ ನೀರು ಹರಿಸಿ ಈಗ ಕೇಂದ್ರದ ಮೇಲೆ ಗೂಬೆ ಕೂರಿಸಬೇಡಿ. ರಾಜ್ಯದ ಜನ ದಂಗೆ ಎದ್ದ ಬಳಿಕ ಕಾಂಗ್ರೆಸ್​​ಗೆ ಎಚ್ಚರವಾಗಿದೆ ಅಂತಾ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಗ್ಗಟ್ಟು ಪ್ರದರ್ಶನಕ್ಕೆ ನಿರ್ಧರಿಸಲಾಗಿದೆ