Publish Date: Sat, 09 May 2020 (16:25 IST)
Updated Date: Sat, 09 May 2020 (16:31 IST)
ಏಕವಚನದಲ್ಲಿ ಸಂಸದ ಹಾಗೂ ಶಾಸಕ ಕಿತ್ತಾಡಿಕೊಂಡ ಘಟನೆ ನಡೆದಿದೆ.
ದಾವಣಗೆರೆ ಸಂಸದ ಸಿದ್ದೇಶ್ವರ ಹಾಗೂ ಶಾಸಕ ಮಾಡಾಳು ವಿರುಪಾಕ್ಷಪ್ಪ ಪರಸ್ಪರ ಬೈದಾಡಿಕೊಂಡು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ ಎನ್ನಲಾಗಿದೆ.
ದಾವಣಗೆರೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕೋವಿಡ್ -19 ಸೋಂಕಿನ ಬಗ್ಗೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹಾಗೂ ವೈದ್ಯಕೀಯ ಸಚಿವ ಡಾ.ಸುಧಾಕರ್ ಸಮ್ಮುಖದಲ್ಲಿ ಏ ಏನೋ ಮಾತಾಡ್ತೀಯಾ ನೀನು ಎಂದ ಸಂಸದ, ಏ ಕೂತುಕೊಳ್ಳೊ ನೀನು, ನಿಂದೇನೋ ಎಂದು ಶಾಸಕ ಮಾಡಾಳು ವಿರುಪಾಕ್ಷಪ್ಪ ಜಗಳ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಾಡಾಳು ವಿರುಪಾಕ್ಷಪ್ಪ ಕುಡಿಯುವ ನೀರಿನ ಬಗ್ಗೆ ಮಾತಾಡುತ್ತಿರುವ ವೇಳೆ ಸಂಸದ ಜಿ. ಎಂ. ಸಿದ್ದೇಶ್ವರ್ ಆಕ್ಷೇಪಣೆ ಮಾಡುತ್ತಿದ್ದಂತೆ ಏಕವಚನದಲ್ಲಿ ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಮಾತನಾಡಿದ್ದಾರೆ.
ಮಾಡಾಳು ವಿರುಪಾಕ್ಷಪ್ಪ ಮಾತಿಗೆ ಕುರ್ಚಿಯಿಂದ ಎದ್ದು, ಮಾಡಾಳು ಬಳಿ ಬಂದು ಏನೋ ನಿಂದು ಅಂತ ಹೇಳುತ್ತಲೆ ಕೈ ಕೈ ಮಿಲಾಯಿಸುವ ಹಂತಕ್ಕೆ ತೆರಳಿ ಗಲಾಟೆಗೆ ಮುಂದಾಗಿದ್ದಾರೆ. ಈ ವೇಳೆ ಎಸ್ ಪಿ ಹನುಮಂತರಾಯ ಮಧ್ಯ ಪ್ರವೇಶಿಸಿ ಗಲಾಟೆಗೆ ಬ್ರೇಕ್ ಹಾಕಿದ್ದು, ಸಂಸದ ಹಾಗೂ ಶಾಸಕರ ವರ್ತನೆಯಿಂದ ಮೂಕಪ್ರೇಕ್ಷರಾದ ಸಚಿವದ್ವಯರು ನೋಡುತ್ತ ಕೂತಿದ್ದರು.