ಬ್ಯಾಂಕ್ ಆಫ್ ಬರೋಡಾ ಬೆಂಗಳೂರು ವಲಯದಿಂದ ಏರ್ಪಡಿಸಿದ್ದ ಸಾಲ ವ್ಯಾಪ್ತಿ ಉಪಕ್ರಮ ಕಾರ್ಯಕ್ರಮಕ್ಕೆ ಬ್ಯಾಂಕ್ ಆಫ್ ಬರೋಡದ ಕಾರ್ಯನಿರ್ವಹಕ ನಿರ್ದೇಶಕ ಸಂಜೀವ್ ಚಡ್ಡ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಗ್ರಾಹಕರಿಗೆ ಸಾಲ ಹಂಚಿಕೆ ಹಾಗೂ ಡಿಜಿಟಲ್ ಸೌಲಭ್ಯಗಳನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರು, ರೈತರು, ವಾಣಿಜ್ಯೋದ್ಯೋಮಿಗಳು ಮತ್ತು ವ್ಯಾಪಾರ ಸಂಸ್ಥೆಗಳಿಗೆ ಬ್ಯಾಂಕ್ ಆಫ್ ಬರೋಡವು ಪ್ರೋತ್ಸಾಹಿಸಿದೆ. ಸಾಲವನ್ನು ವಿತರಿಸುವ ಮೂಲಕ ರಾಷ್ಟ್ರದ ಅರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ.
ಕಾರ್ಯನಿರ್ವಾಹಕ ನಿರ್ದೇಶಕ ಜಾಯ್‍ದೀಪ್ ದತ್ತ ರಾಯ್, ವಲಯ ಮುಖ್ಯಸ್ಥಸುಧಾಕರ್ ಡಿ. ನಾಯಕ್, ಉಪ ವಲಯ ಮುಖ್ಯಸ್ಥ ಬಿ.ಶಿವರಾಮ್, ಎನ್‍ಡಿಜಿಎಂ ಮುರಳಿಕೃಷ್ಣ ಸೇರಿ ಮತ್ತಿತರರಿದ್ದರು.