Publish Date: Mon, 25 Oct 2021 (21:50 IST)
Updated Date: Mon, 25 Oct 2021 (21:53 IST)
ಬೆಂಗಳೂರು: ಬಿಡಿಎ ಭ್ರಷ್ಟ ಅಧಿಕಾರಿಗಳಿಬ್ಬರು 2 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಎಇಇ ಮಂಜುನಾಥ್, ಸರ್ವೆಯರ್ ಜಯರಾಮ್ 2 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಸೆರೆ ಸಿಕ್ಕಿದ್ದಿದ್ದಾರೆ.
ಆರ್.ಟಿ. ನಗರದಲ್ಲಿ ಹಳೇ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುವ ಸಂಬಂಧ ಕಾಮಗಾರಿ ನಡೆಯುತ್ತಿತ್ತು. ಸ್ಥಳಕ್ಕೆ ತೆರಳಿ ಕಾಮಗಾರಿ ಸ್ಥಗಿತಕ್ಕೆ ಬಿಡಿಎ ಎಇಇ ಸೂಚಿಸಿದ್ದರು. ಬಳಿಕ ಸರ್ವೆಯರ್ ಜಯರಾಮ್ ಸಂಪರ್ಕಿಸಲು ಹೇಳಿದ್ದರು.
ಸರ್ವೆಯರ್ ಜಯರಾಮ್‌ರನ್ನು ದೂರುದಾರ ಸಂಪರ್ಕಿಸಿದ್ದರು. 5 ಲಕ್ಷ ರೂಪಾಯಿ ಲಂಚ ನೀಡುವಂತೆ ಸರ್ವೆಯರ್ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 2 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಭ್ರಷ್ಟ ಅಧಿಕಾರುಗಳು ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಲಂಚದ ಹಣ ಜಪ್ತಿ ಮಾಡಲಾಗಿದೆ ಎನ್ನಲಾಗಿದೆ.