Select Your Language

Notifications

webdunia
webdunia
webdunia
webdunia

ಗಾಂಧೀಜಿ ಶಿಲ್ಪಗಳ ಲೋಕಾರ್ಪಣೆ ನ.6ರಂದು

ಗಾಂಧೀಜಿ ಶಿಲ್ಪಗಳ ಲೋಕಾರ್ಪಣೆ ನ.6ರಂದು
ಮೈಸೂರು , ಶನಿವಾರ, 3 ನವೆಂಬರ್ 2018 (16:00 IST)
ಮಹಾತ್ಮ ಗಾಂಧೀಜಿಯವರ ವಿವಿಧ ಭಂಗಿಗಳ 26 ಶಿಲ್ಪಗಳು ಸಿದ್ಧಗೊಂಡಿದ್ದು, ನವೆಂಬರ್ 6 ರಂದು ಲೋಕಾರ್ಪಣೆಗೊಳ್ಳಲಿವೆ.

ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ರಾಜಣ್ಣ, ಮಾನಸ‌ ಗಂಗೋತ್ರಿಯ ಗಾಂಧಿ ಅಧ್ಯಯನ ಸಂಸ್ಥೆ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ನವೆಂಬರ್ 6 ರಂದು ಗಾಂಧೀಜಿ ಕುರಿತ ಸಿಮೆಂಟ್ ಶಿಲ್ಪಗಳ ಲೋಕಾರ್ಪಣೆ ಸಮಾರಂಭ ನಡೆಯಲಿದೆ.

ಕನ್ನಡ ಮತ್ತು ಸಂಸ್ಕೃತ ಇಲಾಖೆ ,  ಕರ್ನಾಟಕ ಶಿಲ್ಪಕಲಾ ಅಕಾಡಮಿ  ಬೆಂಗಳೂರು, ರಂಗಾಯಣ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ಸಹಕಾರದಲ್ಲಿ ಈ ಸಮಾರಂಭ ನಡೆಯುತ್ತಿದೆ ಎಂದರು.

ಗಾಂಧೀಜಿಯವರ ವಿವಿಧ ಭಂಗಿಗಳ 26 ಶಿಲ್ಪಗಳು ರೆಡಿಯಾಗಿವೆ. ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ತಯಾರಿಸಲಾಗಿದೆ. ಸಚಿವರಾದ ಜಿ.ಟಿ. ದೇವೇಗೌಡರು ಉದ್ಘಾಟನೆ ಮಾಡಲಿದ್ದಾರೆ. ಸಮಾರಂಭದಲ್ಲಿ ವಿವಿಧ ಗಣ್ಯರು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಉಗ್ರಪ್ಪ ಮತ ಚಲಾಯಿಸುವ ಫೋಟೋ ವೈರಲ್