Select Your Language

Notifications

webdunia
webdunia
webdunia
webdunia

ಬೆಳಗಾವಿ-ಬೆಂಗಳೂರು ರೈಲಿಗೆ ದಿವಂಗತ ಸುರೇಶ್ ಅಂಗಡಿ ಹೆಸರು; ಕೇಂದ್ರಕ್ಕೆ ಪ್ರಸ್ತಾವನೆ!

ಬೆಳಗಾವಿ-ಬೆಂಗಳೂರು ರೈಲಿಗೆ ದಿವಂಗತ ಸುರೇಶ್ ಅಂಗಡಿ ಹೆಸರು; ಕೇಂದ್ರಕ್ಕೆ ಪ್ರಸ್ತಾವನೆ!
belagavi , ಸೋಮವಾರ, 27 ಸೆಪ್ಟಂಬರ್ 2021 (20:57 IST)
ಬೆಳಗಾವಿ: ಮಾಜಿ ಕೇಂದ್ರ ಸಚಿವ ದಿವಂಗತ ಸುರೇಶ್ ಅಂಗಡಿ(Former Indian minister of state for railways) ನಮ್ಮನ್ನೆಲ್ಲ ಅಗಲಿ ಸೆಪ್ಟೆಂಬರ್ 23ಕ್ಕೆ ಒಂದು ವರ್ಷ ಕಳೆದು ಹೋಗಿದೆ. ಕೊರೋನಾ(Corona)ದಿಂದಾಗಿ ಅಕಾಲಿಕ ನಿಧನ ಹೊಂದಿದ ದಿವಂಗತ ಸುರೇಶ್ ಅಂಗಡಿ(Suresh Angadi) ಅವರ ಮೊದಲ ವರ್ಷದ ಸ್ಮರಣಾರ್ಥ ಅಂಗವಾಗಿ ಬೆಳಗಾವಿಯ(Belgaum) ಸಾವಗಾಂವದ ಅಂಗಡಿ ಕಾಲೇಜಿನಲ್ಲಿ ಕುಟುಂಬ ಸದಸ್ಯರು ಕಾರ್ಯಕ್ರಮದ ಆಯೋಜನೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಅಂಗಡಿ ಜೊತೆ ಉತ್ತಮ ಒಡನಾಟ ಹೊಂದಿದ್ದ ಎಲ್ಲಾ ಪಕ್ಷದ ನಾಯಕರು ಭಾಗಿಯಾಗಿದ್ದು ವಿಶೇಷವಾಗಿತ್ತು. ಮುಖ್ಯಮಂತ್ರಿ ಬಸವರಾಜ ಅಜಾತ ಶತ್ರು ಸುರೇಶ್ ಅಂಗಡಿ
 
ಸುರೇಶ್ ಅಂಗಡಿಯವರು ಅಜಾತ ಶತ್ರು .ಎಲ್ಲರ ಪ್ರೀತಿಯನ್ನು ಗಳಿಸಿದ ವ್ಯಕ್ತಿತ್ವ ಅವರದ್ದು. ಅವರು ತಮ್ಮ ವ್ಯಕ್ತಿತ್ವದಿಂದ ಎಲ್ಲರ ಹೃದಯವನ್ನ ಗೆದ್ದಿದ್ದಾರೆ. ಇದೇ ಕಾರಣಕ್ಕೆ ಪ್ರತಿ ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸಿದ್ದಾರೆ ಎಂದು ಸ್ಮರಿಸಿದರು. ಸುರೇಶ್ ಅಂಗಡಿ ಏಳಿಗೆಯಲ್ಲಿ ಪತ್ನಿ ಮಂಗಳಾ ಅಂಗಡಿ ಮತ್ತು ಅವರ ತಾಯಿಯ ಪಾತ್ರ ದೊಡ್ಡದಾಗಿದೆ. ಸುರೇಶ್ ಅಂಗಡಿ ಅವರ ಮನೆಗೆ ಹೋದ್ರೆ ಬಿಸಿ ರೊಟ್ಟಿ ಊಟ ಹಾಕಿಯೇ ನನ್ನನ್ನ ಕಳಿಸುತ್ತಿದ್ದರು. ಇನ್ನು, ಉತ್ತರ ಕರ್ನಾಟಕ ಮತ್ತು ಹಿಂದುತ್ವದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು ಎಂದು ಹೇಳಿದರು.
 
ರೈಲ್ವೆ ಯೋಜನೆಯಲ್ಲಿ ಅಂಗಡಿ ಕ್ರಾಂತಿ
 
ಮುಂದುವರೆದ ಬೊಮ್ಮಾಯಿ, ಒಬ್ಬ ವ್ಯಕ್ತಿಯ ಕೈಯಲ್ಲಿ ಅಧಿಕಾರ ಕೊಟ್ಟರೆ ಅವರ ನಿಜವಾದ ಸಾಮರ್ಥ್ಯ ಮತ್ತು ಅಸಾಮರ್ಥ್ಯ ಎರಡು ಗೊತ್ತಾಗುತ್ತದೆ. ಅಧಿಕಾರ ಕೊಟ್ಟ ಕೆಲವೇ ತಿಂಗಳಲ್ಲಿ ಕರ್ನಾಟಕದಲ್ಲಿ ರೈಲ್ವೆ ಯೋಜನೆಯಲ್ಲಿ ಕಾಂತ್ರಿ ಮಾಡಿದ್ದಾರೆ. ನೆನೆಗುದ್ದಿಗೆ ಬಿದ್ದಿದ್ದ ಎಲ್ಲಾ ಯೋಜನೆ ಗಳಿಗೆ ಚಾಲನೆ ಕೊಡಿಸಿದ್ರು. ಯಡಿಯೂರಪ್ಪ ಅವರೇ ನನಗೆ ಹೇಳಿದ್ರು, ಸುರೇಶ್ ಅಂಗಡಿ ಇಷ್ಟ ಕೆಲಸ ಮಾಡ್ತಾನೆ ಅನ್ನೋದೇ ನನಗೆ ಗೊತ್ತಿರಲಿಲ್ಲ ಅಂತಾ. ರೈಲ್ವೆ ಬೋರ್ಡ್​​ನಲ್ಲಿ ಫೈನಾನ್ಸ್ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ದೇಶದ ಎಲ್ಲಾ ರಾಜ್ಯದಲ್ಲೂ ರೈಲ್ವೆ ಕೆಲಸವನ್ನ ಸುರೇಶ್ ಅಂಗಡಿ ಮಾಡಿದ್ದಾರೆ ಎಂದಿದ್ದಾರೆ.
 
ಬೆಳಗಾವಿ-ಧಾರವಾಡ ರೈಲು ಯೋಜನೆ ಕಾಮಗಾರಿ
 
ಇನ್ನು ಸುರೇಶ್ ಅಂಗಡಿ ಅವರ ಕನಸಿನ ಪ್ರಾಜೆಕ್ಟ್ ಆಗಿದ್ದ ಬೆಳಗಾವಿ-ಧಾರವಾಡ ಮಧ್ಯೆ ನೇರ ರೈಲು ಮಾರ್ಗ ಯೋಜನೆ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳುವೆ. ರಾಜ್ಯ ಸರ್ಕಾರದ ಪಾಲಿನ ಹಣವನ್ನ ನೀಡಿ ಯೋಜನೆ ಅನುಷ್ಠಾನಕ್ಕೆ ಕ್ರಮ ಜರುಗಿಸುವ ಭರವಸೆಯನ್ನು ಸಿಎಂ ಬೊಮ್ಮಾಯಿ ನೀಡಿದರು.
 
ರೈಲಿಗೆ ಸುರೇಶ್ ಅಂಗಡಿ ಹೆಸರು
 
ಇನ್ನು ಸುರೇಶ್ ಅಂಗಡಿ ಹಾಗೂ ನಮ್ಮ ನಡುವೆ ಯಾವಾಗಲೂ ಜಗಳ ಆಗುತ್ತಿತ್ತು. ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಾವಣೆ ಮಾಡಲು ಅಂಗಡಿ ಯೋಚನೆ ಮಾಡಿದಾಗೆಲ್ಲಾ, ನಮಗೆ ಸಮಸ್ಯೆ ಆಗುತ್ತೆ, ಇರುವ ಸಮಯವೇ ಇರಲಿ ಎಂದು ವಾದ ಮಾಡುತ್ತಿದ್ದೆವು. ಹಾಗಾಗಿ ನಮಗೆ ಬೇಸತ್ತು ಬೆಳಗಾವಿಯಿಂದ ರಾತ್ರಿ 9 ಗಂಟೆ ಸುಮಾರಿಗೆ ನೇರವಾಗಿ ಬೆಳಗಾವಿ ಬೆಂಗಳೂರು ಹೊಸ ರೈಲನ್ನೇ ಬಿಡಿಸುವ ಮೂಲಕ ಇಲ್ಲಿನ ಜನರಿಗೆ ಅನುಕೂಲ ಮಾಡಿದ್ದಾರೆ.
 
ಹಾಗಾಗಿ ಇವತ್ತಿಗೂ ಇಲ್ಲಿನ ಆ ರೈಲನ್ನ ಸುರೇಶ್ ಅಂಗಡಿ ಅವರ ರೈಲು ಎಂದು ಕರೆಯುತ್ತಾರೆ. ಅಂಗಡಿ ಅವರ ನೆನಪಿಗಾಗಿ ಆ ರೈಲಿನ ಹೆಸರನ್ನು ಅಂಗಡಿ ಎಕ್ಸ್‌ಪ್ರೆಸ್‌ ರೈಲು ಎಂದು ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.ಬೊಮ್ಮಾಯಿ(CM Basavaraj Bommai) ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುರೇಶ್ ಅಂಗಡಿ ಜೊತೆ ಕಳೆದ ಕೆಲ ನೆನಪುಗಳನ್ನ ಮೆಲುಕು ಹಾಕಿದ್ದಾರೆ.
 
ಅಂಗಡಿ ಕಂಚಿನ ಮೂರ್ತಿ ಅನಾವರಣ
 
ಇದಕ್ಕೂ ಮೊದಲು ಅಂಗಡಿ ಇನ್​ಸ್ಟಿಟ್ಯೂಟ್ ಗೆ ಆಗಮಿಸಿದ ಬಸವರಾಜ ಬೊಮ್ಮಾಯಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ರು. ಬಳಿಕ ಕಾಲೇಜು ಆವರಣದಲ್ಲಿ ಸ್ಥಾಪಿಸಿದ ದಿ. ಸುರೇಶ್ ಅಂಗಡಿ ಅವರ ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಿದರು. ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಸವರಾಜ ಬೊಮ್ಮಾಯಿ, ಸುರೇಶ್ ಅಂಗಡಿ ಜೊತೆ ಕಳೆದ ಕೆಲ ಸಂಗತಿಗಳನ್ನ ಮೆಲುಕು ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸದನದಲ್ಲಿ ಸಿದ್ದರಾಮಯ್ಯ ಮಾತಾಡ್ಲಿಲ್ಲ- ಎಚ್ ಡಿ ಕೆ