Select Your Language

Notifications

webdunia
webdunia
webdunia
webdunia

ಮಹಿಳಾ ಸಬಲೀಕರಣದ ಕಡೆಗೆ ಮತ್ತೊಂದು ಹೆಜ್ಜೆ

ಮಹಿಳಾ ಸಬಲೀಕರಣದ ಕಡೆಗೆ ಮತ್ತೊಂದು ಹೆಜ್ಜೆ
bangalore , ಸೋಮವಾರ, 27 ಸೆಪ್ಟಂಬರ್ 2021 (20:20 IST)
ಮಹಿಳಾ ಸಬಲೀಕರಣದ ಕಡೆಗೆ ಮತ್ತೊಂದು ಹೆಜ್ಜೆಸೌದಿ ಅರೇಬಿಯಾವು ಮಹಿಳಾ ಸಬಲೀಕರಣದ ಕಡೆಗೆ ಮಹತ್ವದ ಹೆಜ್ಜೆ ಇರಿಸಿದೆ. ಸುಮಾರು 600 ಸೌದಿ ಮಳೆಯರಿಗೆ ಹಲವು ರೀತಿಯ ತರಬೇತಿಗಳನ್ನು ನೀಡಿದ್ದು, ಇದೀಗ ಎರಡು ಪ್ರಮುಖ ಮಸೀದಿಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವರದಿ ಪ್ರಕಾರ, ಎರಡು ಮಸೀದಿಗಳ ವ್ಯವಹಾರಗಳ ಜನರಲ್ ಪ್ರೆಸಿಡೆನ್ಸಿ ಇದುವರೆಗೆ ತನ್ನ ಏಜೆನ್ಸಿಗಳ ಅಥವಾ ಸಹಾಯಕ ಏಜೆನ್ಸಿಗಳ ಮೂಲಕ 600 ಮಹಿಳಾ ಉದ್ಯೋಗಿಗಳಿಗೆ ತರಬೇತಿ ನೀಡಿದೆ ಎಂದು ಹೇಳಿದೆ.ಮಹಿಳಾ ಅಭಿವೃದ್ಧಿ ವ್ಯವಹಾರಗಳ ಏಜೆನ್ಸಿಯು ಅಲ್-ಅನೌದ್ ಅಲ್-ಅಬೌದ್ ನೇತೃತ್ವದದಲ್ಲಿ ತರಬೇತಿ ಪಡೆದ ಮಹಿಳೆಯರ ಪೈಕಿ 310 ಮಂದಿಯನ್ನು ನೇಮಿಸಿಕೊಂಡಿದೆ.
 
ಮಹಿಳಾ ವೈಜ್ಞಾನಿಕ, ಬೌದ್ಧಿಕ ಮತ್ತು ಮಾರ್ಗದರ್ಶನ ವ್ಯವಹಾರಗಳ ಏಜೆನ್ಸಿಯಲ್ಲಿ ಸುಮಾರು 200 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಉಳಿದವರು ಮಹಿಳಾ ಆಡಳಿತ ಮತ್ತು ಸೇವಾ ವ್ಯವಹಾರಗಳ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
 
ಕೆಲವು ತಿಂಗಳುಗಳ ಹಿಂದಷ್ಟೇ ಸೌದಿ ಅರೇಬಿಯಾದ ಸರ್ಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿತ್ತು. ಸೇನೆಗೆ ಸೇರಲು ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ಅವಕಾಶ ನೀಡಿತ್ತು. ಮಹಿಳೆಯರ ಮೇಲೆ ಹಲವಾರು ನಿಬಂಧನೆಗಳನ್ನು ವಿಧಿಸುವ ಸೌದಿ ಸರ್ಕಾರ ಇಂತಹ ನಿರ್ಧಾರ ತೆಗೆದುಕೊಂಡಿರುವುದು ಗಮನಾರ್ಹ.
 
ಸೇನೆಗೆ ಸೇರಬೇಕೆಂಬ ಆಸಕ್ತಿ ಇರುವ ಮಹಿಳೆಯರು ಅರ್ಜಿ ಸಲ್ಲಿಸಬಹುದೆಂದು ಕಳೆದ ವಾರ ಪ್ರಕಟಿಸಿತ್ತು. ಮಹಿಳೆಯರನ್ನು ಎಲ್ಲ ಕ್ಷೇತ್ರಗಳಲ್ಲೂ ಪ್ರೋತ್ಸಾಹಿಸಬೇಕೆಂಬ ಉದ್ದೇಶದಿಂದ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ.
 
ಸೇನೆಯಲ್ಲಿ ಸೇರಬಯಸುವ ಮಹಿಳೆಯರು ಕಡ್ಡಾಯವಾಗಿ ಸೌದಿ ನಾಗರಿಕರಾಗಿರಬೇಕು. ಸೌದಿಯಲ್ಲಿ ಬೆಳೆದಿರಬೇಕು, ಹೈಸ್ಕೂಲ್ ಅಥವಾ ತತ್ಸಮಾನ ಶಿಕ್ಷಣ ಪಡೆದಿರಬೇಕು ಎಂಬ ಅರ್ಹತೆಗಳನ್ನು ವಿಧಿಸಿದೆ. ಅಭ್ಯರ್ಥಿ ವಯಸ್ಸು 25 ರಿಂದ 35 ವರ್ಷಗಳ ನಡುವೆ ಇರಬೇಕು, ಕನಿಷ್ಠ 155 ಸೆಂ.ಮೀ ಉದ್ದ ಇರಬೇಕು, ಅದಕ್ಕೆ ತಕ್ಕ ತೂಕ ಇರಬೇಕೆಂದು ಅಲ್ಲಿನ ಸರಕಾರ ಪ್ರಕಟಿಸಿದೆ.
 
ಪರೀಕ್ಷೆ ಪಾಸಾದ ಬಳಿಕ ಸಂದರ್ಶನ, ವೈದ್ಯಕೀಯ ಪರೀಕ್ಷೆಗಳು ಇರುತ್ತವೆ ಎಂದು ತಿಳಿಸಿದೆ. ಅದೇ ರೀತಿ ಅಭ್ಯರ್ಥಿ ಸೌದಿಯೇತರ ವ್ಯಕ್ತಿಯನ್ನು ವಿವಾಹವಾಗಿರಬಾರದು ಎಂಬ ನಿಯಮವನ್ನೂ ವಿಧಿಸಿದೆ. ಆಯ್ಕೆಯಾದ ಮಹಿಳೆಯರನ್ನು ರಿಯಾದ್, ಮೆಕ್ಕಾ, ಮದೀನಾ, ಖಾಸಿಮ್, ಅಸ್ಸೆರ್, ಅಲ್ ಬಹಾ, ಈಸ್ಟ್ರನ್ ಪ್ರಾವಿನ್ಸ್‌ಗಳಲ್ಲಿ ನಿಯಮಿಸಲಾಗುವುದು ಎಂದು ಪಬ್ಲಿಕ್ ಸೆಕ್ಯುರಿಟಿ ಜನರಲ್ ಡೈರೆಕ್ಟರ್ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಕೊರೊನಾ ಬೆನ್ನಲ್ಲೇ ಡೆಂಗಿ ಪ್ರಕರಣಗಳು ಹೆಚ್ಚಳ -291 ಕೇಸ್ ಪತ್ತೆ!