Select Your Language

Notifications

webdunia
webdunia
webdunia
webdunia

ರಾಜಧಾನಿಯಲ್ಲಿ ತಡ ರಾತ್ರಿಯಿಂದ ಒಂದೇ ಸಮನೆ ಸುರಿದ ಮಳೆ

ರಾಜಧಾನಿಯಲ್ಲಿ ತಡ ರಾತ್ರಿಯಿಂದ ಒಂದೇ ಸಮನೆ ಸುರಿದ ಮಳೆ
bangalore , ಬುಧವಾರ, 6 ಅಕ್ಟೋಬರ್ 2021 (19:16 IST)
ಬೆಂಗಳೂರು: ನಗರದ ಹಲವು ಭಾಗಗಳಲ್ಲಿ ಮಂಗಳವಾರ ತಡ ರಾತ್ರಿಯಿಂದ ಭಾರಿ ಮಳೆ ಬೆಳಗಿನ ಜಾವದವರೆಗೂ ಸುರಿಯಿತು. ಕೆಲವು ರಸ್ತೆ ಹಾಗೂ ತಗ್ಗುಪ್ರದೇಶಗಳಲ್ಲಿ ನೀರು ನುಗ್ಗಿ ಕೊಚ್ಚೆ ಗುಂಡಿಯ ವಾತಾವರಣ ಕಂಡು ಬಂದಿದೆ. ತಡ ರಾತ್ರಿಯಿಂದ ಮಳೆ ಪ್ರಾರಂಭವಾಗಿದ್ದರಿಂದ ವಾಹನ ಸವಾರರರಿಗೆ ತೊಂದರೆಯಾಗಿಲ್ಲವಾದರೂ ಇಂದು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.
 
ಹಲವೆಡೆ ಮಳೆ: 
 
ನಗರದ ಆರ್.ಆರ್. ನಗರ, ಅಂಜನಪುರ, ಬೇಗೂರು, ಯಲಹಂಕ, ವಿದ್ಯಾಾರಣ್ಯಪುರ, ಮಹದೇವಪುರ, ಹೊರಮಾವು, ಪ್ಯಾಲೆಸ್ ಗುಟ್ಟಹಳ್ಳಿ, ಮಲ್ಲೇಶ್ವರ, ವಿಧಾನಸೌಧ, ಪುಲಕೇಶಿನಗರ, ನಾಗರಬಾವಿ, ಕೋರಮಂಗಲ, ನಾಯಂಡಹಳ್ಳಿ, ಲಕ್ಕಸಂದ್ರ, ವಿದ್ಯಾಾಪೀಠ, ಕೆಂಗೇರಿ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಸದಾಶಿವನಗರ, ಯಶವಂತಪುರ, ಹೂಡಿ, ವಿಶ್ವನಾಥನಾಗೇನಹಳ್ಳಿ, ರಾಮಮೂರ್ತಿನಗರ, ಕಾಡುಗೋಡಿ, ಮನೋರಾಯಯನಪಾಳ್ಯ, ಹೊರಮಾವು, ಬಸವನಪುರ, ದೊಡ್ಡನೆಕುಂದಿ, ಕೊಟ್ಟಿಗೆಪಾಳ್ಯ, ಬಾಣಸವಾಡಿ, ಚೊಕ್ಕಸಂದ್ರ, ಪೀಣ್ಯ, ವಿದ್ಯಾಾರಣ್ಯಪುರ, ಅತ್ತೂರು, ಕೆಂಪೇಗೌಡ ವಾರ್ಡ್, ಬಾಗಲಗುಂಟೆ, ದೊಡ್ಡಬೊಮ್ಮಸಂದ್ರ, ಬ್ಯಾಾಟರಾಯನಪುರ, ಹೆಗ್ಗನಹಳ್ಳಿ, ಕಲ್ಯಾಣನಗರ, ಬೆಳ್ಳಂದೂರು, ಸಿಂಗಸಂದ್ರ ಸೇರಿದಂತೆ ಬಹುತೇಕ ಕಡೆ  ಮಳೆಯಾಗಿದೆ.
 
ಪ್ರಮುಖ ರಸ್ತೆಗಳಲ್ಲಿ ನೀರು:
 
ಭಾರಿ ಮಳೆಗೆ ಮಲ್ಲೇಶ್ವರ, ಮೈಸೂರು ರಸ್ತೆ, ರಾಜಭವನ ರಸ್ತೆ, ಶಿವಾಜಿನಗರ, ರಾಜಾಜಿನಗರ, ಪ್ಯಾಲೆಸ್ ಗುಟ್ಟಹಳ್ಳಿ, ಹಲಸೂರು, ಶಿವಾನಂದ ವೃತ್ತ, ಕೆ.ಆರ್.ಪುರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೀರು ನಿಂತುಕೊಂಡಿದ್ದು ಕಂಡು ಬಂದಿತು. ಪಾಲಿಕೆಯ ವಿವಿಧ ಅಭಿವೃದ್ಧಿ ಕಾಮಗಾರಿ ಸ್ಥಳಗಳಲ್ಲಿ ನೀರು ನಿಂತಿದ್ದ ದೃಶ್ಯ ಕೂಡ ಕಂಡುಬಂದಿದ್ದು ಪಾಲಿಕೆ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಶಿಥಿಲ ಕಟ್ಟಡಗಳು, ಮರಗಳು ಪದಚಾರಿಗಳ ಮೇಲೆ ಬೀಳುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿದ್ದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರು ಮಂದಿ ಆರೋಪಿಗಳ ವಿರುದ್ಧ ಎನ್‍ಐಎ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ