ಹೃದಯ ವೈಫಲ್ಯ ಹೊಂದಿದವರಿಗೆ ಅಳವಡಿಸುವ ಕೃತಕ ಹೃದಯ ಉಪಕರಣವನ್ನು ಯಶಸ್ವಿಯಾಗಿ ತೆಗೆದು ಹಾಕುವ ಶಸ್ತ್ರಚಿಕಿತ್ಸೆಯನ್ನು ನಗರದ ಪ್ರತಿಷ್ಠಿತ  ಫೋರ್ಟಿಸ್ ಆಸ್ಪತ್ರೆ ನಡೆಸಿದ್ದು, ಇದು ದೇಶದಲ್ಲೇ ಮೊದಲ ಶಸ್ತ್ರಚಿಕಿತ್ಸೆಯಾಗಿದೆ ಎಂದು  ಪ್ರಕಟಣೆಯಲ್ಲಿ ತಿಳಿಸಿದೆ.  
 
 			
 
 			
			                     
							
							
			        							
								
																	
	 
	ಈ ಕುರಿತು ಫೋರ್ಟಿಸ್ ಹಾರ್ಟ್ ಆಂಡ್ ವ್ಯಾಸ್ಕಲರ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಡಾ. ಅಜಯ್ ಕೌಲ್ ಹೇಳಿಕೆ ನೀಡಿದ್ದು,   ಭಾರತದಲ್ಲೇ ಇದೇ ಮೊದಲ ಬಾರಿಗೆ ವ್ಯಕ್ತಿಗೆ ಅಳವಡಿಸಲಾಗಿದ್ದ ಕೃತಕ ಹೃದಯವನ್ನು ಸಂಪೂರ್ಣವಾಗಿ ತೆಗೆದುಹಾಕುವ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ. ವಿಶ್ವದಲ್ಲಿಯೇ ಇಂಥ ಶಸ್ತ್ರಚಿಕಿತ್ಸೆ ಅತ್ಯಂತ ವಿರಳವಾದದ್ದು ಎಂದು ಹೇಳಿದ್ದಾರೆ. 
	 
	ಶಸ್ತ್ರಚಿಕಿತ್ಸೆಯ ವಿವರ: 
	 
	ಇರಾನ್ ದೇಶದ 56 ವರ್ಷ ವಯಸ್ಸಿನ ಪುರುಷ ರೋಗಿಯು ಸಂಪೂರ್ಣ ಹೃದಯ ವೈಫಲ್ಯದ ಸಮಸ್ಯೆ ಅನುಭವಿಸುತ್ತಿದ್ದರು.  ಹೃದಯ ಕಸಿ ಅನಿರ್ವಾಯವಾಗಿತ್ತು. ಆದರೆ, ಹೃದಯ ದಾನ ಮಾಡುವವರ ಕೊರತೆಯಿಂದ ಕೆಲ ತಿಂಗಳುಗಳ ಕಾಲ ಚಿಕಿತ್ಸೆಯಲ್ಲೇ ಮುಂದುವರೆದಿದ್ದರು.  ಆದರೆ, ಪರಿಸ್ಥಿತಿ ಕೈ ಮೀರಿದ ಬಳಿಕ ಅವರಿಗೆ ಕೃತಕ ಹೃದಯ ಅಳವಡಿಕೆ ಮಾಡಲು ನಿರ್ಧರಿಸಿ ಲೆಫ್ಟ್ ವೆಂಟ್ರಿಕುಲರ್ ಅಸಿಸ್ಟ್  ಡಿವೈಸ್ (ಎಲ್‌ವಿಎಡಿ) ರಕ್ತ ಪಂಪ್ ಮಾಡುವ ಡಿವೈಸ್‌ನನ್ನು ಅಳವಡಿಸಲಾಯಿತು. ಇದನ್ನು ಕೃತಕ ಹೃದಯದ ಎನ್ನಲಾಗುವುದು. ಸಾಮಾನ್ಯವಾಗಿ ಕೃತಕ ಹೃದಯ ಅಳವಡಿಸಿದ ಬಳಿಕ ಅದು ಹಾಗೇ ಮುಂದುವರೆಯಬೇಕಾಗುತ್ತದೆ. ಇದರ ಸಹಾಯವಿಲ್ಲದೇ ಹೃದಯ ಪಂಪ್ ಆಗುವುದಿಲ್ಲ. ಆದರೆ, ಈ ಪ್ರಕರಣದಲ್ಲಿ, ರೋಗಿಯು ಕೃತಕ ಹೃದಯದ ಮೂಲಕ ಕಾಲ ಕ್ರಮೇಣ ಇವರ ಹೃದಯ ಗುಣವಾಗುತ್ತಾ ಬಂದಿತ್ತು. ಎಲ್‌ವಿಎಡಿ ಸಹಾಯವಿಲ್ಲದೇ ಹೃದಯ ಪಂಪ್ ಆಗುತ್ತಿತ್ತು. ಹೀಗಾಗಿ ಕೃತಕ ಹೃದಯವನ್ನು ಸಂಕೀರ್ಣ ಚಿಕಿತ್ಸೆ ಮೂಲಕ ತೆಗೆದು ಹಾಕುವುದು ವೈದ್ಯಕೀಯ ಕ್ಷೇತ್ರಕ್ಕೇ ದೊಡ್ಡ ಸವಾಲಾಗಿತ್ತು. ಆದರೆ, ನಮ್ಮ ತಂಡ, ಹೊಸ ಪ್ರಯೋಗದೊಂದಿಗೆ 12 ಗಂಟೆಗಳ ಶಸ್ತ್ರಚಿಕಿತ್ಸೆಯ ತರುವಾಯ ಯಶಸ್ವಿಯಾಗಿ ಕೃತಕ ಹೃದಯವನ್ನು ತೆಗೆದು ಹಾಕಲಾಗಿದೆ. ಈ ಶಸ್ತ್ರಚಿಕಿತ್ಸೆ ದೇಶದಲ್ಲೇ ಮೊದಲ ಬಾರಿಗೆ ನಡೆಸಲಾಗಿದೆ. ಈ ಶಸ್ತ್ರಚಿಕಿತ್ಸೆ ಬಳಿಕ ರೋಗಿಯು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇದು ನಮ್ಮ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡಕ್ಕೆ ಸಂದ ಜಯವಾಗಿದೆ ಎಂದು ವಿವರಿಸಿದ್ದಾರೆ.