Select Your Language

Notifications

webdunia
webdunia
webdunia
Thursday, 3 April 2025
webdunia

ಬಾರ್ ನಲ್ಲಿ ಎಣ್ಣೆ ಕೊಡೋದ ತಡ..ಸಪ್ಲೈಯರ್ ಮೇಲೆ ಹಲ್ಲೆ

Late delivery of oil at the bar..Assault on the supplier
bangalore , ಶುಕ್ರವಾರ, 17 ಫೆಬ್ರವರಿ 2023 (20:38 IST)
ಅದು ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ.ಬಾರ್ ನಲ್ಲಿ ಎಣ್ಣೆ ಕೊಡೋದು ಲೇಟ್ ಆಯ್ತು ಅಂತಾ ಶುರುವಾದ ಜಗಳ.ಸಪ್ಲೈಯರ್ ತಲೆ ಹಿಡಿದು ಗೋಡೆಗೆ ಜಜ್ಜಿದ್ರು ಕಿರಾತಕರು.ಇಷ್ಟಾದರು ಆ ದಿನ ಏಟು ತಿಂದವನು ಚನ್ನಾಗೆ ಇದ್ದ.ಮರು ದಿನ ತಲೆ ತಿರುಗ್ತಿದೆ ಅಂದೋನು ಕೋಮಾಗೆ ಹೋಗಿಬಿಟ್ಟಿದ್ದ.ಸತತ 23 ದಿನ ಸಾವು ಬದುಕಿನ ಹೋರಾಟ ನಡೆಸಿದವನು ಕೊನೆಗೆ ಪ್ರಾಣ ಬಿಟ್ಟಿದ್ದಾನೆ.ಆರೋಪಿಗಳು ಅಂದರ್ ಆಗಿದ್ದಾರೆ.ಖುದ್ದು ಇನ್ಸ್ಪೆಕ್ಟರೇ ತನಿಖೆಗೆ ಇಳಿದಿದ್ದಾರೆ..ಬಾರ್ ಗೆ ತೆರಳಿ ಇಂಚಿಂಚೂ ಶೋಧಿಸ್ತಿದ್ದಾರೆ.‌.ಸ್ಥಳ ಮಹಜರು ಮಾಡ್ತಿದ್ದಾರೆ..ಪೊಲೀಸ್ ವಶದಲ್ಲಿರುವ ಕ್ರಿಮಿಗಳು ಅದ್ಹೇಗೇ ನೋಡ್ತಿದ್ದಾರೆ ನೋಡಿ..ಅಷ್ಟಕ್ಕೂ ಈ ಆಸಾಮಿಗಳ ಹೆಸರು ಸುರೇಶ್ ಕುಮಾರ್ ಮತ್ತು ವಿನೋದ್ ಕುಮಾರ್.ಡಿಪ್ಲಮೋ ಮಾಡಿರುವ ಇವ್ರು ವಾಟರ್ ಫಿಲ್ಟರ್ ,ವಾಶಿಂಗ್ ಮಷಿನ್ ರಿಪೇರಿ ಮಾಡೊ ಕೆಲಸ ಮಾಡ್ತಿದ್ರು.ತಾವಾಯ್ತು ತಮ್ಮ ಕೆಲಸ ಆಯ್ತು ಅಂತಾ ತೆಪ್ಪಗೆ ಇದ್ದಿದ್ದರೆ ಇವತ್ತು ಕೈಗೆ ಬೇಡಿ ಹಾಕಿಕೊಂಡು ಬರೊ‌ ಪರಿಸ್ಥಿತಿ ಎದುರಾಗ್ತಿರ್ಲಿಲ್ಲ.ಆದ್ರೆ ಕುಡಿದ ಮತ್ತಲ್ಲಿ ಮಂಡ್ಯ ಮೂಲದ ಬಾರ್ ಸಪ್ಲೈಯರ್ 39 ವರ್ಷದ ಬಸವರಾಜ ಎಂಬಾತನನ್ನ ಕೊಂದು ಜೈಲು ಸೇರಿದ್ದಾರೆ.

ಕುಮಾರಸ್ವಾಮಿ ಲೇಔಟ್ ಮುಖ್ಯರಸ್ತೆಯಲ್ಲಿರುವ ಎಸ್ ಆರ್ ಆರ್ ಬಾರ್ ನಲ್ಲಿ ಬಸವರಾಜ ಸಪ್ಲೈಯರ್ ಆಗಿ ಕೆಲಸ ಮಾಡಿಕೊಂಡಿದ್ದ.ಜನವರಿ 22 ರ ಸಂಜೆ ಬಾರ್ ಗೆ ಬಂದಿದ್ದ ಸುರೇಶ್ ಕುಮಾರ್ ಮತ್ತು ವಿನೋದ್ ಕುಮಾರ್ ಎಣ್ಣೆ ಕೇಳಿದ್ದಾರೆ ಸಪ್ಲೇ ಮಾಡೋದು ತಡವಾಗಿದ್ದಕ್ಕೆ ಜಗಳ ಮಾಡಿಕೊಂಡು ವಾಪಸ್ಸು ತೆರಳಿದ್ದಾರೆ.ಬೇರೆ ಬಾರ್ ನಲ್ಲಿ ಕುಡಿದು ಮತ್ತೆ ರಾತ್ರಿ 10.30 ಕ್ಕೆ ಎಸ್ ಆರ್ ಆರ್ ಬಾರ್ ಬಳಿ ಬಂದಿದ್ದ ಆರೋಪಿಗಳು ಜಗಳಕ್ಕೆ ನಿಂತಿದ್ದಾರೆ.ಈ ವೇಳೆ ಬಸವರಾಜ್ ತಲೆ ಹಿಡಿದು ಗೋಡೆಗೆ ಹೊಡೆಸಿದ್ದಾರೆ.ಇದರಿಂದ ಬಸವರಾಜ ತಲೆ ಮತ್ತು ಕಿವಿಯಲ್ಲಿ ರಕ್ತ ಬಂದಿದೆ.ಇಷ್ಟಾದರು ಆತ ನಾರ್ಮಲ್ ಆಗೇ ಇದ್ದ.ಆದರೆ 23 ರಂದು ತಲೆ ನೋವಾಗಿ ತಿರುಗಿದಂತಾಗಿದೆ.ಸ್ಕ್ಯಾನ್ ಮಾಡಿಸಿದಾಗ ತಲೆಯಲ್ಲಿ ಬ್ಲಡ್ ಕ್ಲಾಟ್ ಆಗಿರೋದು ಗೊತ್ತಾಗಿದೆ.ಹಾಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತಿದ್ದಾತ 24 ರಂದು ಕೋಮಾಗೆ ಹೋಗಿದ್ದಾನೆ.ಅಲ್ಲಿಂದ ಈಚೆಗೆ ಆತನಿಗೆ ಪ್ರಜ್ಙೆ ಬರಲೇ ಇಲ್ಲ.ಫೆಬ್ರವರಿ 15 ರಂದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವನು 23 ದಿನದ ಬಳಿಕ ಸಾವನ್ನಪ್ಪಿದ್ದಾನೆ.ಕೊಲೆ ಪ್ರಕರಣ ದಾಖಲಿಸಿಕೊಂಡಿರೊ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
 
ಏನೇ ಹೇಳಿ..ಕೇವಲ ಎಣ್ಣೆ ಕೊಡೋದು ಲೇಟಾಯ್ತು ಅನ್ನೋ ಕಾರಣಕ್ಕೆ ಒಬ್ಬನ ಪ್ರಾಣವನ್ನೇ ತೆಗೆದಿರೋದು ನಿಜಕ್ಕೂ ವಿಪರ್ಯಾಸ.ನಾಡಿದ ತಪ್ಪಿಗೆ ಖದೀಮರಿಬ್ಬರು ಜೈಲು ಸೇರಿದ್ದಾರೆ


Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ಹಿನ್ನೆಲೆ ಘೊಷಣೆಗಳ ಬಜೆಟ್ ಮಾಡಿದ್ದಾರೆ ವಿಪಕ್ಷಗಳ ಆರೋಪ.!