ಬೆಂಗಳೂರು: ರೇಷನ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿ, ಸೇರ್ಪಡೆ ಅಥವಾ ತೆಗೆದು ಹಾಕುವ ಕೆಲಸ ಮಾಡಬೇಕಿದ್ದರೆ ಕೊನೆಯ ದಿನಾಂಕ ಯಾವಾಗ ಇಲ್ಲಿದೆ ವಿವರ.
ರಾಜ್ಯದ ಪಡಿತರ ಚೀಟಿದಾರರಿಗೆ ಹೆಸರು ಸೇರ್ಪಡೆಗೊಳಿಸಲು, ತೆಗೆದು ಹಾಕಲು ಅಥವಾ ತಿದ್ದುಪಡಿ ಮಾಡಲು ಕೊನೆಯ ಅವಕಾಶ ನೀಡಲಾಗಿದೆ. ಫೆಬ್ರವರಿ 28 ರೊಳಗಾಗಿ ತಿದ್ದುಪಡಿ ಮಾಡಿಕೊಳ್ಳಲು ಆಹಾರ ಇಲಾಖೆ ಗಡುವು ನೀಡಿದೆ.
ವಿಳಾಸ ಬದಲಾವಣೆ ಮಾಡಬೇಕಾಗಿದ್ದಲ್ಲಿ, ಹೆಸರು ತಪ್ಪಾಗಿದ್ದಲ್ಲಿ ಸರಿಪಡಿಸಲು ಅಥವಾ ಹೊಸದಾಗಿ ಕಾರ್ಡ್ ಗೆ ಹೆಸರು ಸೇರ್ಪಡೆ ಮಾಡಬೇಕಾಗಿದ್ದಲ್ಲಿ ಫೆಬ್ರವರಿ 28 ರೊಳಗಾಗಿ ಮಾಡಲು ಅವಕಾಶವಿದೆ.
ಬೆಳಿಗ್ಗೆ 10 ರಿಂದ ಸಂಜೆ 5 ರೊಳಗಾಗಿ ತಿದ್ದುಪಡಿ ಮಾಡಿಕೊಳ್ಳಬಹುದು. ನಿಮ್ಮ ಸಮೀಪದ ಬೆಂಗಳೂರು ಒನ್ ಸೆಂಟರ್ ಅಥವಾ ಸೈಬರ್ ಸೆಂಟರ್ ಗಳಲ್ಲಿ ನೀವಾಗಿಯೇ ಹೋಗಿ ತಿದ್ದುಪಡಿ ಮಾಡಿಕೊಳ್ಳಬಹುದು. ಇಲ್ಲವೇ ಆನ್ ಲೈನ್ ಮೂಲಕ ನೀವೇ ಮಾಡಿಕೊಳ್ಳುವುದಿದ್ದರೆ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಮಾಡಿಕೊಳ್ಳಬಹುದು.
ಬೇಕಾಗುವ ದಾಖಲೆಗಳು
ಹೆಂಡತಿಯ ಹೆಸರು ಸೇರ್ಪಡೆಗೆ ಮದುವೆ ನೋಂದಣಿ ಪತ್ರ, ಆಧಾರ್ ಕಾರ್ಡ್, ತವರು ಮನೆಯ ಪಡಿತರ ಚೀಟಿ ಅಗತ್ಯವಾಗಿದೆ. ಮಗುವಿನ ಹೆಸರು ಸೇರ್ಪಡೆಗೆ ಮಗುವಿನ ಜನನ ಪ್ರಮಾಣ ಪತ್ರ, ಹೆತ್ತವರ ಆಧಾರ್ ಕಾರ್ಡ್ ಅಗತ್ಯವಾಗಿದೆ.