Select Your Language

Notifications

webdunia
webdunia
webdunia
webdunia

ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಮಾಡಬೇಕಾ, ಹೇಗೆ ಇಲ್ಲಿದೆ ವಿವರ

Ration card

Krishnaveni K

ಬೆಂಗಳೂರು , ಬುಧವಾರ, 4 ಡಿಸೆಂಬರ್ 2024 (09:32 IST)
ಬೆಂಗಳೂರು: ಪಡಿತರ ಚೀಟಿಯಲ್ಲಿ ನಿಮ್ಮ ಹೆಸರು ಸೇರ್ಪಡೆ ಅಥವಾ ತಿದ್ದುಪಡಿ ಮಾಡಬೇಕಾ? ಹಾಗಿದ್ದರೆ ರಾಜ್ಯ ಆಹಾರ ಇಲಾಖೆ ಇಂದಿನಿಂದ ಅವಕಾಶ ನೀಡುತ್ತಿದೆ. ಮಾಡುವುದು ಹೇಗೆ ಇಲ್ಲಿದೆ ವಿವರ.

ಪಡಿತರ ಚೀಟಿಯಲ್ಲಿ ಹೊಸ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ, ಹೆಸರು ತೆಗೆಯುವುದಕ್ಕೆ ಇಂದಿನಿಂದ ಅವಕಾಶ ನೀಡಲಾಗುತ್ತಿದೆ. ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಹೊಸದಾಗಿ ತಮ್ಮ ಮಕ್ಕಳು, ಮದುವೆಯಾಗಿ ಬಂದ ಹೆಣ್ಣು ಮಕ್ಕಳ ಹೆಸರು ಸೇರ್ಪಡೆಗೆ ಅವಕಾಶ ಸಿಗಲಿದೆ.

ತಿದ್ದುಪಡಿ ಎಲ್ಲಿ ಮಾಡಬೇಕು?
ಆಫ್ ಲೈನ್ ಮೂಲಕ ತಿದ್ದುಪಡಿ ಮಾಡುವವರು ಬೆಂಗಳೂರು ಒನ್, ಸೈಬರ್ ಸೆಂಟರ್ ಗಳಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು.  ಎಪಿಎಲ್ ಕಾರ್ಡ್ ಪಡೆಯುವವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಎಪಿಎಲ್ ಕಾರ್ಡ್ ಹೊಂದಿರುವವರು ತಿದ್ದುಪಡಿ ಮಾಡುವುದಿದ್ದರೆ ಆಹಾರ ಇಲಾಖೆ https://ahara.kar.nic.in/lpg/ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ಏನೆಲ್ಲಾ ದಾಖಲೆಗಳು ಬೇಕು?
ಮಗುವಿನ ಹೆಸರು ಸೇರ್ಪಡೆಗೊಳಿಸಬೇಕಿದ್ದರೆ ಜನನ ಪ್ರಮಾಣ ಪತ್ರ
ಮಗುವಿನ ಪೋಷಕರ ಆಧಾರ್ ಕಾರ್ಡ್
ಹೆಂಡತಿಯ ಹೆಸರು ಸೇರ್ಪಡೆಗೆ ಆಕೆಯ ಆಧಾರ್ ಕಾರ್ಡ್, ಗಂಡನ ಮನೆಯ ಪಡಿತರ ಚೀಟಿ ಪ್ರತಿ
ಈ ದಾಖಲೆಗಳು ಇದ್ದರೆ ಆನ್ ಲೈನ್ ಮೂಲಕವೂ ನೀವೇ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆ ಬಳಿಕ ನೀವು ನೀಡಿರುವ ದಾಖಲಾತಿಗಳು ಸರಿಯಾಗಿದೆ ಎಂದು ದೃಢಪಟ್ಟರೆ ನಿಮ್ಮ ಮನೆಗೆ ಅಪ್ ಡೇಟ್ ಆದ ಪಡಿತರ ಚೀಟಿ ನೀಡಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೆಬೆಲ್ ಲೀಡರ್ ಬಸನಗೌಡ ಪಾಟೀಲ್ ಯತ್ನಾಳ್ ರಿಂದ ಇಂದು ಹೈಕಮಾಂಡ್ ನಾಯಕರ ಭೇಟಿ