Select Your Language

Notifications

webdunia
webdunia
webdunia
webdunia

ಉಳ್ಳವರಲ್ಲಿ ಬಿಪಿಎಲ್ ಕಾರ್ಡ್‌ ಇದ್ದರೆ, ಕಿತ್ತು ಇಲ್ಲದವರಿಗೆ ನೀಡಬೇಕು: ನಟ ಚೇತನ್‌

Karnataka BPL Card Issue, Actor Chetan Ahimsa, Chief Minister Siddaramaiah,

Sampriya

ಬೀದರ್ , ಸೋಮವಾರ, 18 ನವೆಂಬರ್ 2024 (19:28 IST)
Photo Courtesy X
ಬೀದರ್: ರಾಜ್ಯದಲ್ಲಿ  ಅರ್ಹತೆ ಇರುವವರಿಗೆ  ಬಿಪಿಎಲ್‌ ಕಾರ್ಡ್‌ ಸಿಗುತ್ತಿಲ್ಲ. ಅನರ್ಹರು ಬಿಪಿಎಲ್‌ ಕಾರ್ಡ್‌ ಹೊಂದಿದ್ದಾರೆ.  ಹೀಗಾಗಿ ಮೊದಲು ಬಿಪಿಎಲ್ ಕಾರ್ಡ್‌ಗಳನ್ನು ಸರ್ಕಾರ ಪರಿಷ್ಕರಣೆ ಮಾಡಬೇಕು ಎಂದು ನಟ ಚೇತನ್   ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಮಾತಾನಾಡಿದ ಅವರು, ಒಂದು ತಿಂಗಳ ಹಿಂದೆ ಸರ್ಕಾರ ಬಿಪಿಎಲ್ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡುತ್ತಾರೆ ಎಂದಿದ್ದರು. ಆದರೆ ಇನ್ನೂ ಮಾಡಿಲ್ಲ. ಪರಿಷ್ಕರಣೆ ಮಾಡಿದರೆ ರೇಷನ್ ಕಾರ್ಡ್ ವಿಚಾರದಲ್ಲಿ ಏನಾಗಿದೆ ಎಂದು ಗೊತ್ತಾಗುತ್ತದೆ. ಆದರೆ ನಮಗೆ ಸಮಸ್ಯೆಯಾಗುತ್ತಿರುವುದು ಸರ್ಕಾರದ ನಿರಾಸಕ್ತಿ, ಸಮಸ್ಯೆಗೆ ಪರಿಹಾರ ನೀಡಬೇಕು ಎಂಬ ಮನಸ್ಥಿತಿ ಸರ್ಕಾರದಲ್ಲಿ ಇಲ್ಲ ಎಂದು ಅಸಮಾಧಾನ ಹೊರಹಾಕಿದರು.

ಪ್ರಸ್ತುತ ರಾಜಕೀಯದಲ್ಲಿ ವೈಯಕ್ತಿಕ ಟೀಕೆಗಳೆ ಹೆಚ್ಚಾಗಿದೆ. ಹೀಗಾದರೆ ಉತ್ತಮ ಕೆಲಸಗಳು ಆಗಲ್ಲ.ಉಳ್ಳವರ ಬಳಿ ಬಿಪಿಎಲ್ ಕಾರ್ಡ್‌ಗಳು ಇದ್ದರೆ, ಅದನ್ನು ಕಿತ್ತುಕೊಂಡು ಬಂದು ಇಲ್ಲದವರಿಗೆ ಸರ್ಕಾರ ನೀಡಬೇಕು. ಪರಿಷ್ಕರಣೆ ಜೊತೆಗೆ ರೇಷನ್ ಕಾರ್ಡ್‌ಗಳ ಬಗ್ಗೆ ತನಿಖೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕುಮಾರಸ್ವಾಮಿಯನ್ನು ಕರಿಯಾ ಎಂದ ಸಚಿವ ಜಮೀರ್ ವಿರುದ್ಧ ಶಿಸ್ತು ಕ್ರಮಕ್ಕೆ ಕಾಂಗ್ರೆಸ್‌ ಚಿಂತನೆ