Publish Date: Thu, 16 Sep 2021 (21:55 IST)
Updated Date: Thu, 16 Sep 2021 (21:59 IST)
ಬೆಂಗಳೂರು: ವಿಧಾನಸೌಧದ ಸಮೀಪ ಭೂಕುಸಿತ ಉಂಟಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗೇಟ್ ನಂಬರ್ 2ರ ಬಳಿ ಡಾಂಬರು ಹಾಕಿದ ರಸ್ತೆಯಲ್ಲಿ ಸಂಜೆ ದಿಢೀರನೆ ಘಟನೆ ನಡೆಯಿತು. ಸುಮಾರು 10 ಅಡಿಯಷ್ಟು ಕುಸಿತ ಉಂಟಾಗಿದ್ದು, ಯಾವುದೇ ಹಾನಿಯಾಗಿಲ್ಲ.
ಈ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಓಡಾಡುತ್ತಿದ್ದು, ಭೂಕುಸಿತದಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿತ್ತು. ಕಾರೊಂದು ಸ್ವಲ್ಪ ಅಂತರದಲ್ಲೇ ಪಾರಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಕುಸಿತವಾಗಿರುವ ಸ್ಥಳದಲ್ಲಿ ಬ್ಯಾರಿಕೇಡ್ ನಿರ್ಮಿಸಿ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.