Select Your Language

Notifications

webdunia
webdunia
webdunia
webdunia

ಹಬ್ಬಗಳ ಎಫೆಕ್ಟ್ , ರಾಜಧಾನಿಯಲ್ಲಿ ಕೋವಿಡ್ ಬ್ಲಾಸ್ಟ್ !!

ಹಬ್ಬಗಳ ಎಫೆಕ್ಟ್ , ರಾಜಧಾನಿಯಲ್ಲಿ ಕೋವಿಡ್ ಬ್ಲಾಸ್ಟ್ !!
bangalore , ಗುರುವಾರ, 16 ಸೆಪ್ಟಂಬರ್ 2021 (21:19 IST)
ಇಷ್ಟು ದಿನ ಕೊಂಚ ಸೈಲೆಂಟ್ ಆಗಿದ್ದ ಕೊರೊನ ಈಗ ಮತ್ತೆ ವೈಲೆಂಟ್ ಆಗಿದೆ . ಧಿಡೀರ್ ಕೋವಿಡ್ ಸೋಂಕು ಹೆಚ್ಚಾಗಿದೆ ..ಹೀಗಾಗಿ ಬಿಬಿಎಂಪಿ ಕೊರೊನ 3ನೇ ಅಲೆ ತಡೆಬೇಕು ಅಂತ ಪ್ಲಾನ್ ಮಾಡಿದೆ .ಹಾಗೋ ಹೀಗೂ ಇಷ್ಟು ದಿನ ಕೊಂಟ್ರೋಲ್ ನಲ್ಲಿದ್ದ ಕೊರೊನ ಈಗ ಮತ್ತೆ ತನ್ನ ಅಟ್ಟಹಾಸ ಮುಂದುವರೆಸಿದೆ. ಸರ್ಕಾರ ಹಬ್ಬಗಳ  ವೇಳೆ ಕೋವಿಡ್ ಕಟ್ಟಿ ಹಾಕ ಬೇಕು ಅಂತ ಸ್ಪೆಷಲ್ ಗೈಡ್ ಲೈನ್ಸ್ ಕೋಟ್ರಿ ದ್ರು ಕೂಡ ಪಾಲನೆ ಆಗದೆ ಫೇಲ್ ಆಗಿತ್ತು .ಅದ್ರ ಎಫೆಕ್ಟ್ ಈಗ ಕೇಸ್ ಗಳ ಸಂಖ್ಯೆ ಹೆಚ್ಚಾಗಳು ಕಾರಣವಾಗಿದೆ . ಇಷ್ಟು ದಿನ 200 ರ ಆಸುಪಾಸಿನಲಿದ್ದ ಕೇಸ್ ಗಳು ನೆನ್ನೆ 400 ಕ್ಕೂ ಹೆಚ್ಚು ಕೇಸ್ ದಾಖಲಾಗುವಂತೆ ಮಾಡಿದೆ . ಹೀಗಾಗಿ ಬಿಬಿಎಂಪಿ ಈಗ ಕೇಸ್ ಗಳನ್ನು ತಡೆಯಲು ಮತ್ತೆ ಟೆಸ್ಟ್ ಗಳನ್ನು ಹೆಚ್ಚಳ ಮಾಡಿದೆ .ಮೂರನೇ ಅಲೆ ಆತಂಕದ ನಡುವೆಯೇ ಮಕ್ಕಳಲ್ಲಿ ಫ್ಲೂ ಕೂಡ ಹೆಚ್ಚಾಗಿದೆ ಕೊರೋನಾ ಇರೋದ್ರಿಂದ ಫ್ಲೂ ಬಂದ್ರು ಕೂಡ ಜನ ಹೆದರುತ್ತಿದ್ದರೆ . ಹೀಗಾಗಿ ಮಕ್ಕಳಿಗೆ ಆರ್ ಟಿ ಪಿಸಿಆರ್ ಟೆಸ್ಟ್ ಹೆಚ್ಚಳಕ್ಕೆ ಬಿಬಿಎಂಪಿ  ಸೂಚನೆ ನೀಡಿದೆ . ೧೦೦ ಟೆಸ್ಟ್ ಮಾಡಿದ್ರೇ ೧೦ ಸ್ಯಾಂಪಲ್ ಮಕ್ಕಳದ್ದೇ ಇರಬೇಕು ಅಂತ ವಿಶೇಷ ಆದೇಶ ಕೂಡ ನೀಡಿದೆ . 
 
 
ಇನ್ನು ಇತ್ತ ಶಾಲಾ ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಲು ಬಿಬಿಎಂಪಿ ಮುಂದಾಗಿದೆ . ಪ್ರತಿ ಶಾಲೆಗೂ ನೋಡೆಲ್ ಶಿಕ್ಷಕರ ನೇಮಕಕ್ಕೆ ಮುಂದಾಗಿದ್ದು .ಸೋಂಕು ಲಕ್ಷಣ ಕಂಡುಬಂದ ಕೂಡಲೇ ಪಿ ಎಚ್ ಸಿಗೆ ಮಾಹಿತಿ ನೀಡಬೇಕು ಅಂತ ತಿಳಿಸಿದೆ . ಇನ್ನು ಈ ಬಗ್ಗೆ ಪೋಷಕರಿಗೆ ಕೂಡ ಮಾಹಿತಿ ನೀಡುತ್ತಿದ್ದು ಮಕ್ಕಳಿಗೆ ಕೋವಿಡ್ ಲಕ್ಷಣ ಇದ್ರೆ 1 ವಾರ ಶಾಲೆಗೆ ಕಳಿಸದಂತೆ ತಿಳಿಸುತ್ತಿದೆ . ಒಟ್ಟಿನಲ್ಲಿ ಹಬ್ಬ ಹರಿ ದಿನದಲ್ಲಿ ಜನರು ಕೋವಿಡ್ ರೂಲ್ಸ್ ಗಾಳಿಗೆ ತುರಿದ ಪರಿಣಾಮ ಮತ್ತೆ ಕೇಸ್ ಗಳ. ಸಂಖ್ಯೆ ಹೆಚ್ಚಳವಾಗಿದೆ . ತಜ್ಞರ ಪ್ರಕಾರ ಇನ್ನು ಕೆಲ ದಿನ ಕೇಸ್ ಗಳ ಸಂಖ್ಯೆ ಹೀಗೆ ಇರುತ್ತೆ ಅಂತಾರೆ . ಆದ್ರೆ  ಈಗಾಗಲೇ ರೂಪಾಂತರಿ ಹಾಗೂ ಉಪ ವಂಶವಳಿಗಳುಸದ್ದು ಮಾಡುತ್ತಿದ್ದು ಇದರಿಂದ ಲೇ ಎಲ್ಲಿ ಮೂರನೇ ಅಲೆ ಆರಂಭ ಆಗುತ್ತೋ ಅನ್ನೋ ಆತಂಕ ಎಲ್ಲರಲ್ಲೂ ಜಾಸ್ತಿ ಮಾಡಿದೆ .

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಒಟ್ಟು 40.57 ಕೋಟಿ ರೂ ಮೌಲ್ಯದ ಆಸ್ತಿ ಬಿಡಿಎ ವಶಕ್ಕೆ