Select Your Language

Notifications

webdunia
webdunia
webdunia
webdunia

ಪಿ. ಆರ್ ರಮೇಶ್ ಕಾರಿನಲ್ಲಿ ಊರಿಂದೂರಿಗೆ ಜಾಲಿ ರೈಡ್: ಶೋರೂಂ ವಿರುದ್ಧ ಎಫ್.ಐ.ಆರ್

ramesh  fir
bangalore , ಗುರುವಾರ, 16 ಸೆಪ್ಟಂಬರ್ 2021 (20:57 IST)
ಬೆಂಗಳೂರು: ಮಾಜಿ ಮೇಯರ್ ಪಿ. ಆರ್ ರಮೇಶ್ ಕಾರಿನಲ್ಲಿ ಊರಿಂದೂರಿಗೆ ಸಿಬ್ಬಂದಿ ಜಾಲಿ ರೈಡ್ ತೆರಳಿದ್ದಾರೆ. ಈ ಸಂಭಂದ ದುರ್ಬಳಕೆ ಮಾಡಿದ ಶೋರೂಂ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.
 
ಮಾಜಿ ಮೇಯರ್ ಮತ್ತು ಕಾಂಗ್ರೇಸ್ ಪಕ್ಷದ ಎಂಎಲ್ ಸಿ ಆಗಿದ್ದ ಪಿ. ಆರ್ ರಮೇಶ್ ರವರ ಇನ್ನೋವಾ ಕಾರನ್ನು ಪತ್ನಿ ಸರಸ್ವತಿ ರಿಪೇರಿಗೆ ಎಂದು ಸೆಪ್ಟೆಂಬರ್ 7 ರಂದು ಬೆಂಗಳೂರಿನ ರಾಜಾಜಿನಗರದ ರವೀಂದು ಟೋಯೋಟ ಸರ್ವಿಸ್ ಸೆಂಟರ್ ನಲ್ಲಿ ಬಿಟ್ಟಿದ್ದರು.
 
ಸೆಪ್ಟೆಂಬರ್ 11 ರಂದು ಮಧ್ಯರಾತ್ರಿ ಕಾರು ಚಿತ್ರದುರ್ಗ ಟೋಲ್‌ಗಳನ್ನು ದಾಟಿ 200 ಕಿಲೋಮೀಟರ್ ದೂರಕ್ಕೆ ಹೋಗಿದೆ. ರಿಪೇರಿಗೆ ಬಿಟ್ಟಿದ್ದ ಕಾರಿನಲ್ಲಿ ರಾಜಧಾನಿ ಬಿಟ್ಟು ತೆರಳಿರುವುದು ತಿಳಿಯಿತು.
 
ಟೋಲ್ ಗಳಲ್ಲಿ ಕಾರು ಪಾಸ್ ಆಗಿ ಫಾಸ್ಟ್ ಟ್ಯಾಗ್ ಮೂಲಕ ಹಣ ಕಡಿತವಾದ ರಿಪೇರಿಗೆ ಬಿಟ್ಟಿದ್ದ ಕಾರು ಟೋಲ್ ಗಳನ್ನು ದಾಟಿದ ಮೇಸೆಜ್ ಮಾಲೀಕರಿಗೆ ಬಂದಿತ್ತು. ಫಾಸ್ಟ್ ಟ್ಯಾಗ್ ನಲ್ಲಿ ಹಣ ಏಕಾಏಕಿ ಹಣ ಕಡಿತವನ್ನು ನೋಡಿ ಗಾಬರಿಯಾಗಿದ್ದ ರಮೇಶ್ ದಂಪತಿ ಶೋರೂಂಗೆ ಹೋಗಿ ವಿಚಾರಿಸಿದ್ದಾರೆ. ಸಮಂಜಸ ಉತ್ತರ ಬಾರದಿದ್ದಾಗ. ದುರ್ಬಳಕೆ, ನಂಬಿಕೆ ದ್ರೋಹ ಹಾಗೂ ವಂಚನೆಯಡಿ ದೂರು ಸಮಸ್ಯೆ. ಈ ನಗರದ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ 406, 420 ಅಡಿ ಎಫ್.ಐ.ಆರ್ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮೆಯಾರ್

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಶಾಲೆಗಳಿಗೆ ಸ್ವೆಟರ್ ಹಂಚಿಕೆಯಲ್ಲಿ ಭ್ರಷ್ಟಾಚಾರ