ಜಮೀನು ವಿವಾದಕ್ಕೆ ಸಂಬಂಧಿಸಿ ಎರಡು ಕುಟುಂಬಗಳ ನಡುವೆ ನಡೆದ ಭೀಕರ ಜಗಳದಲ್ಲಿ ಒಂದೇ ಕುಟುಂಬದ ನಾಲ್ವರು ಸೋದರರನ್ನು ಹತ್ಯೆ ಮಾಡಿದ ಭೀಕರ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ನಡೆದಿದೆ.
ಮಧುರಕಂಡಿ ಗ್ರಾಮದ ನಿವಾಸಿಗಳಾದ ಹನುಮಂತ (48), ಮಲ್ಲಪ್ಪ (44) ಈಶ್ವರ್ (46) ಬಸವರಾಜ (36) ಮೃತ ದುರ್ದೈವಿಗಳು.
ಜಮೀನು ವಿವಾದಕ್ಕೆ ಸಂಬಂಧಿಸಿ ಎರಡು ಕುಟುಂಬಗಳು ಹೊಡೆದಾಟಕ್ಕೆ ಇಳಿದಿದ್ದು, ಜಮೀನಿನಲ್ಲಿ ಒಂದೇ ಕುಟುಂಬದವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಮತ್ತೊಂದು ಕುಟುಂಬ ಬರ್ಬರವಾಗಿ ಹತ್ಯೆಗೈದಿದೆ.
ಘಟನಾ ಸ್ಥಳಕ್ಕೆ ಮಧುಕಂಡಿ ಗ್ರಾಮೀಣ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.