Publish Date: Sat, 11 Jan 2020 (17:39 IST)
Updated Date: Sat, 11 Jan 2020 (17:41 IST)
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಹಾಲಿ ಸಿಎಂಗೆ ಬಹಿರಂಗ ಸವಾಲ್ ಹಾಕಿದ್ದಾರೆ.
ಮಂಗಳೂರು ಗಲಭೆ ಕುರಿತು ಬಿಡುಗಡೆ ಮಾಡಿರೋ ಸಿಡಿ ಕಟ್ ಅಂಡ್ ಪೇಸ್ಟ್ ವಿಡಿಯೋ ಅನ್ನೋದನ್ನು ಸಾಬೀತು ಪಡಿಸಲಿ ಅಂತ ಬಿ.ಎಸ್.ಯಡಿಯೂರಪ್ಪರ ವಿರುದ್ಧ ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಶಾಂತಿ ಸ್ಥಾಪನೆಯಾಗಬೇಕಾದರೆ ಬಿಜೆಪಿ ಹಾಗೂ ಸಿಎಂ ತೆಪ್ಪಗಿರಬೇಕು ಅಂತ ವಾಗ್ದಾಳಿ ನಡೆಸಿದ್ದಾರೆ.
ಬಾಲಿಶ ಹೇಳಿಕೆಗಳನ್ನು ನೀಡೋ ಬದಲು, ಸಿಎಂ ಕೋಮು ರಾಜಕರಣವನ್ನು ಬಿಡಲಿ ಅಂತ ಕುಮಾರಸ್ವಾಮಿ ಹೇಳಿದ್ದಾರೆ.