ಸಿಎಂ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ? ಬಿಗ್ ಬ್ರೇಕಿಂಗ್ ನ್ಯೂಸ್

ಬುಧವಾರ, 22 ಮೇ 2019 (15:24 IST)
ಹೆಚ್.ಡಿ. ಕುಮಾರಸ್ವಾಮಿ ನಾಳೆ ಸಂಜೆಯವರೆಗೆ ಮಾತ್ರ ಮುಖ್ಯಮಂತ್ರಿಯಾಗಿರುತ್ತಾರೆ. ಗರಿಷ್ಟ ಎಂದರೆ ನಾಡಿದ್ದು ಬೆಳಗ್ಗೆವರಗೆ ಮಾತ್ರ ಅವರು ಸಿಎಂ ಆಗಿರುತ್ತಾರೆ. ಹೀಗಂತ ಕೇಂದ್ರ ಸಚಿವ ಬಾಂಬ್ ಸ್ಪೋಟಿಸಿದ್ದಾರೆ.

ಮೇ 24ರಂದು ಕುಮಾರಸ್ವಾಮಿ ಅವರು ಅಧಿಕಾರದಿಂದ ಕೆಳಗಿಳಿಯುತ್ತಾರೆ. ಹೊಸ ಸರ್ಕಾರ ರಚನೆಗೆ ನಾವು ಸಿದ್ದತೆಗಳನ್ನು ಮಾಡಿಕೊಳ್ಳಬೇಕಾಗಿದೆ. ಶೇಕಡಾ ನೂರಕ್ಕೆ ನೂರರಷ್ಟು ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳುತ್ತಾರೆ.

ಕುಮಾರಸ್ವಾಮಿ ಮತ್ತು ಚಂದ್ರಬಾಬು ನಾಯ್ಡು ಸಮಾನ ಮನಸ್ಕರು. ಅಧಿಕಾರ ಕಳೆದುಕೊಂಡ ಮೇಲೆ ಇಬ್ಬರೂ ಕೂಡ ತಿರುಗಾಟ ಮಾತ್ರ ಮಾಡಬೇಕಾಗುತ್ತದೆ. ಚಂದ್ರಬಾಬು ನಾಯ್ಡು ಕೂಡ ಅಧಿಕಾರ ಕಳೆದುಕೊಳ್ಳುತ್ತಾರೆ. ಹೀಗಂತ ಡಿ.ವಿ.ಸದಾನಂದಗೌಡ ಹೇಳಿಕೆ ನೀಡಿದ್ದಾರೆ.

ಇನ್ನು, ರೋಷನ್ ಬೇಗ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸತ್ಯವನ್ನು ಬಹಳ ಕಾಲ ಮುಚ್ಚಿಡಲು ಸಾಧ್ಯವಿಲ್ಲ.
ಇವರಿಗೂ ಸಹಿಸಿಕೊಂಡು ಸಾಕಾಗಿದೆ. ರಾಜ್ಯ ಕಂಡ ಅತ್ಯಂತ ದುರಂಹಕಾರಿ ಮಾಜಿ ಸಿಎಂ ಅಂದರೆ ಸಿದ್ಧರಾಮಯ್ಯ ಎಂದು ಟೀಕೆ ಮಾಡಿದ್ರು.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿಗ್ ಬ್ರೇಕಿಂಗ್: ಕುಮಾರಸ್ವಾಮಿ ನಾಳೆ ಸಂಜೆಯವರೆಗೆ ಮಾತ್ರ ಸಿಎಂ!