Select Your Language

Notifications

webdunia
webdunia
webdunia
webdunia

ಜೈಲಲ್ಲಿ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವಿಡಿಯೋ ಕೊಟ್ಟಿದ್ದು ಯಾರು, 400 ಹೆಣ್ಮಕ್ಳಿಗೆ ನ್ಯಾಯ ಕೊಟ್ರಾ: ಕುಮಾರಸ್ವಾಮಿ

HD Kumaraswamy
ಬೆಂಗಳೂರು: ಜೈಲಲ್ಲಿ ಆ ಹುಡುಗನಿಗೆ ಅಶ್ಲೀಲ ವಿಡಿಯೋ ಕೊಟ್ಟಿದ್ದು ಯಾರು, ಅದು ಯಾಕೆ ಈಗ ಬೆಳಕಿಗೆ ಬಂತು.. ಹೀಗೆಂದು ಪ್ರಜ್ವಲ್ ರೇವಣ್ಣ ಬಗ್ಗೆ ಚಿಕ್ಕಪ್ಪ, ಕೇಂದ್ರ ಸಚಿವ ಕುಮಾರಸ್ವಾಮಿ ಮಹತ್ವದ ಹೇಳಿಕೆ ನೀಡಿದ್ದಾರೆ.

15 ದಿನಗಳ ಅಮೆರಿಕಾ ಪ್ರವಾಸ ಮುಗಿಸಿ ಬಂದ ಎಚ್ ಡಿ ಕುಮಾರಸ್ವಾಮಿ ಇಂದು ಪತ್ರಿಕಾಗೋಷ್ಠಿಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಜೈಲಿನಲ್ಲಿ ಇತ್ತೀಚೆಗೆ ಪ್ರಜ್ವಲ್ ರೇವಣ‍್ಣ ಬಳಿ ಮೊಬೈಲ್, ಅಶ್ಲೀಲ ವಿಡಿಯೋ ಪತ್ತೆಯಾದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

‘ಜೈಲಿನಲ್ಲಿ ಆ ಹುಡುಗನಿಗೆ ಅಶ್ಲೀಲ ವಿಡಿಯೋ ಕೊಟ್ಟವರು ಯಾರು? ಎರಡು ವರ್ಷಗಳಿಂದ ಆತ ಮೊಬೈಲ್ ಬಳಸುತ್ತಿದ್ದರೆ ಆತನಿಗೆ ಮೊಬೈಲ್ ಕೊಟ್ಟವರು ಯಾರು? ಇಷ್ಟು ದಿನ ಇವರಿಗೆ ಗೊತ್ತಾಗಲಿಲ್ಲವೇ? ಜೈಲಿನಲ್ಲಿ ಸಣ್ಣ ಪಿಕ್ ಪಾಕೆಟ್ ಮಾಡಿದ ಕೈದಿಯೂ ಮೊಬೈಲ್ ಇಟ್ಟುಕೊಂಡಿದ್ದಾನೆ. ಅದು ಇವರಿಗೆ ಗೊತ್ತಾಗಲಿಲ್ಲವೇ?

ಯಾವಾಗ ಕೆಪಿಎಸ್ ಸಿ ಹಗರಣ, ಬಿಡದಿ ಟೌನ್ ಶಿಪ್ ವಿವಾದ, ನೈಸ್ ಬಗ್ಗೆ ಕೋರ್ಟ್ ನಿಂದ ನೋಟಿಸ್ ಬಂತೋ ಆಗ ಆ ಹುಡುಗನ ಹೆಸರು ಇಟ್ಟುಕೊಂಡು ದೇವೇಗೌಡರ ಕುಟುಂಬದ ಧ್ವನಿ ಮುಚ್ಚಿಸುವ ಕೆಲಸ ಮಾಡ್ತೀರಾ? ಅದೇನೋ 400 ರೇಪ್ ಎಂದ್ರಲ್ಲಾ? ಅದೆಷ್ಟೋ ಹೆಣ್ಣು ಮಕ್ಕಳ ಕುಟುಂಬವನ್ನು ಈ ಹುಡುಗ ಹಾಳು ಮಾಡಿದ್ದಾನೆ ಎಂದ್ರಲ್ಲಾ? ಎಷ್ಟು ಜನಕ್ಕೆ ನ್ಯಾಯ ಕೊಡಿಸಿದ್ರಪ್ಪಾ? ಆ ಹೆಣ್ಣು ಮಕ್ಕಳೆಲ್ಲಾ ಎಲ್ಲಿದ್ದಾರೆ? ಈ ವಿಷಯ ಇಟ್ಟುಕೊಂಡು ನಮ್ಮನ್ನು ಏನಾದರೂ ಹಣಿಯಬಹುದು ಎಂದರೆ ಕನಸು. ನಾನು ದೇವೇಗೌಡರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿರುವವನು. ನನ್ನ ಧ್ವನಿ ಅಡಗಿಸಲು ನಿಮ್ಮಿಂದ ಸಾಧ್ಯವಿಲ್ಲ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕಾಗೆ ಹೋಗುವ ಮುನ್ನ ಎಲ್ಲಾ ಅಲ್ಲೋಲ ಕಲ್ಲೋಲ ಮಾಡ್ತೀನಿ ಎಂದಿದ್ದ ಕುಮಾರಸ್ವಾಮಿ ಈಗ ಬಂದಾಯ್ತು.. ಮುಂದೇನು