Daily Horoscope

Select Your Language

Notifications

webdunia
webdunia
webdunia
webdunia

ಜವಾಬ್ದಾರಿಯುತ ಸ್ಥಾನದಲ್ಲಿದ್ದ ಕುಮಾರಸ್ವಾಮಿ ಈ ರೀತಿ ನಡೆದುಕೊಳ್ಳಬಾರದು: ಪ್ರಿಯಾಂಕ್ ಖರ್ಗೆ ಕಿಡಿ

Minister Priyanka Kharge
ಬೆಂಗಳೂರು:  ಟ್ರೋಲ್ ಕಟ್ಟಬೇಡಿ ಎಂದು ಕೇಂದ್ರ ಸಚಿವರಾಗಿ ಕುಮಾರಸ್ವಾಮಿ ಅವರು  ಪ್ರಚೋದನೆ ಮಾಡೋದು ಸರಿಯಲ್ಲ ಅಂತ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎಂದು ಆಕ್ರೋಶ ಹೊರಹಾಕಿದರು.

ಬೆಂಗಳೂರಿನಲ್ಲಿ ಮಾತಾಡಿದ ಅವರು, ನೈಸ್ ಟೋಲ್ ಕಟ್ಟಬೇಡಿ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಜಬಾಬ್ದಾರಿಯುತ ಸ್ಥಾನದಲ್ಲಿದ್ದವರು ಈ ರೀತಿ ನಡೆದುಕೊಳ್ಳಬಹುದಾ.  ಟೋಲ್ ಕಟ್ಟಬೇಡಿ ಅಂತ ಸಾರ್ವಜನಿಕರಿಗೆ ಪ್ರಚೋದನೆ ಕೊಟ್ಟರೆ ಹೇಗೆ? ಏನೇ ಇದ್ದರೂ ಕೋರ್ಟ್ ಇದೆ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ. ಕ್ರಮ ತೆಗೆದುಕೊಳ್ಳಲಿ. ಏನೇ ಮಾತಾಡಿದ್ರು ಕಾನೂನಾತ್ಮಕವಾಗಿ ಮಾತಾಡಬೇಕು. ಜನರಿಗೆ ಕಾನೂನುಬಾಹಿರ ಕೆಲಸಕ್ಕೆ ಪ್ರಚೋದನೆ ಕೊಡಬಾರದು. ಕೇಂದ್ರ ಸಚಿವರಾಗಿ ಇರೋರು ಹೀಗೆ ಮಾತಾಡೋದು ಸರಿಯಲ್ಲ ಎಂದು ಹೇಳಿದರು.  

ಇದೇ ವೇಳೆ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪಾದಯಾತ್ರೆ ಮಾಡ್ತಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ವಿಜಯೇಂದ್ರ  ಮತ್ತು ಅಶೋಕ್  ತಮ್ಮ ಸ್ಥಾನ ಉಳಿಸಿಕೊಳ್ಳಲು ನಾಗೇಂದ್ರ ರಾಜೀನಾಮೆ ವಿಚಾರ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.  

ಬಿಜೆಪಿ ಅವರು ಪಾದಯಾತ್ರೆ ಮಾಡಲಿ ಯಾರು ಬೇಡ ಅಂದ್ರು. ಹಿಂದೆ ಬಿಡದಿ, ಮುಡಾ ಪಾದಯಾತ್ರೆ ಆಯ್ತು ಈ ರಾಯಚೂರು to ಬಳ್ಳಾರಿ ಅಂತಿದ್ದಾರೆ. ಮಾಡಲಿ ಯಾರು ಬೇಡ ಅಂದ್ರು. ಏನಂತ‌ ಪಾದಯಾತ್ರೆ ಮಾಡ್ತಾರೆ? ಬಿಜೆಪಿ ಅವರು ಶಾಸಕ ಚಂದ್ರು ಲಮಾಣಿ ಅವ್ರನ್ನ ಕೈಬಿಟ್ಟಿದ್ದಾರಾ.?ಮೊನ್ನೆ ಅವ್ರು ಕೂಡ ಘೋಷಣೆ ಕೂಗ್ತಿದ್ರು. ಲೋಕಾಯುಕ್ತ ಟ್ರ್ಯಾಪ್ ಆದವರು ಘೋಷಣೆ ಕೂಗ್ತಿದ್ರು. ಅದನ್ನ ನೋಡಿ ಅಳಬೇಕೋ ನಗಬೇಕಾ ಗೊತ್ತಾಗಿಲ್ಲ ನನಗೆ. ಲೋಕಾಯುಕ್ತದಿಂದ ಟ್ರ್ಯಾಪ್ ಆದವರು ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡ್ತಾ ಇದ್ದರು ಅಂತ ಕಿಡಿಕಾರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಲೂಟಿ ಮಾಡದೆ ಕಾಂಗ್ರೆಸ್ ಬದುಕುವುದಿಲ್ಲ: ಛಲವಾದಿ ನಾರಾಯಣ ಸ್ವಾಮಿ