Select Your Language

Notifications

webdunia
webdunia
webdunia
webdunia

ಬಿಜೆಪಿ ನಾಯಕರು ಸೈಕಲ್ ತುಳಿಯಲು ಕಾರಣಯಾರು: ಪ್ರಿಯಾಂಕ್ ಖರ್ಗೆ

Priyank Kharge
ಕಲಬುರಗಿ: ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ  ಸೇರಿದಂತೆ ಬಿಜೆಪಿ ನಾಯಕರು ಸಾರ್ವಜನಿಕ ಸಾರಿಗೆ ಬಳಸುವ ಪರಿಸ್ಥಿತಿಗೆ ಬರಲು ಕಾರಣ ಯಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದರು. 

ಜಿಲ್ಲೆಯ ಕಾಳಗಿ ತಾಲ್ಲೂಕಿನ ಮಾಡಬೂಳ ಗ್ರಾಮದ ಬಳಿ ನಿರ್ಮಾಣವಾಗಿರುವ ನೂತನ ಮೃಗಾಲಯ ಉದ್ಘಾಟನೆಯ ಬಳಿಕ ಮಾಧ್ಯಮಕ್ಕೆ ಅವರು ಪ್ರತಿಕ್ರಿಯಿಸಿದರು. 

ಇನ್ನೂ ಬಿಜೆಪಿ‌‌ ನಾಯಕರು ಸಾರ್ವಜನಿಕ‌ ಸಾರಿಗೆಗಳನ್ನು ಬಳಸಿ, ಅದರ ರೀಲ್ಸ‌್‌ ಮಾಡಿದಾಕ್ಷಣ ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಜನಸಾಮಾನ್ಯರಿಗೆ ‌ಆಗುತ್ತಿರುವ ತೊಂದರೆ ನೀಗುತ್ತದೆಯೇ ಎಂದು ಪ್ರಶ್ನೆ ಮಾಡಿದರು. 

ಪ್ರಧಾನಿ ಮೋದಿ ಅವರು ಈತನಕ ವಿದೇಶಿ ಯಾತ್ರೆಗೆ ₹850‌ಕೋಟಿ‌ ವೆಚ್ಚವಾಗಿದೆ. ಸ್ವಯಂ ‌ಘೋಷಿತ ವಿಶ್ವಗುರುವಿನಪಟ್ಟದ ಹೊರತು ಭಾರತ ಜನತೆಗೆ‌ ಸಿಕ್ಕಿದ್ದೇನು. ಆತ್ಮನಿರ್ಭರ ಭಾರತ ಘೋಷಣೆ ಏನಾಯಿತು. ಭಾರತ ಇಂಧನದಲ್ಲಿ‌ ಸ್ವಾವಲಂಬಿತನ ಸಾಧಿಸಿತೇ ಎಂದು ಕುಟುಕಿದರು.

ಇನ್ನೂ ದೇಶ ಕಷ್ಟದ ಸ್ಥಿತಿಯಲ್ಲಿರುವಾಗ ಮೋದಿ ವಿದೇಶಕ್ಕೆ ಹೋಗುತ್ತಾರೆ.  ಆರ್ಥಿಕ‌ ಸ್ಥಿತಿಗತಿ, ಪೆಟ್ರೊಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಕಾರಣಗಳನ್ನು ಸಂಸತ್ತಿನಲ್ಲೇ ಹೇಳಬೇಕಿತ್ತು‌. ಅದಕ್ಕಾಗಿ ನೆದರ್ಲ್ಯಾಂಡ್ಸ್‌ಗೆ ಹೋಗುವ ಅನಿರ್ವಾಯವಿತ್ತೆ ಎಂದು ಪ್ರಶ್ನೆ ಮಾಡಿದರು. 


Share this Story:

Follow Webdunia kannada

ಮುಂದಿನ ಸುದ್ದಿ

ಕೇರಳ ಸಿಎಂ ಆಗಿ ವಿಡಿ ಸತೀಶನ್‌ ಪ್ರಮಾಣ ವಚನ, ಕೆಲಸ ಈಗ ಶುರು ಎಂದ ರಾಹುಲ್ ಗಾಂಧಿ