Select Your Language

Notifications

webdunia
webdunia
webdunia
webdunia

ಎಲ್ಲ ಹೊರೆಯನ್ನು ಜನರ ಮೇಲೆ ಹಾಕುವ ಮೋದಿ ಯಾವಾಗ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ

Priyank Kharge
ಬೆಂಗಳೂರು: ಎಲ್ಲಾ ಹೊರೆಯನ್ನು ಜನರ ಮೇಲೆ ಹಾಕುತ್ತಿರುವ ನರೇಂದ್ರ ಮೋದಿಯವರು ಯಾವಾಗ ಜವಾಬ್ದಾರಿ ವಹಿಸಿಕೊಳ್ಳುತ್ತಾರೆಂದು ಕೇಂದ್ರ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದರು. 

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 10 ದಿನಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಿಸಿರುವ ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿದರು. 

ಬೇರೆಲ್ಲ ಕಡೆ ಮಾತನಾಡುವ ಬಿಜೆಪಿ ನಾಯಕರು, ಬೆಲೆ ಏರಿಕೆಗೆ ಉತ್ತರ ನೀಡುತ್ತಿಲ್ಲ. ಮೊನ್ನೆ ಯಾವುದೇ ರೀತಿ ತೊಂದರೆ ಆಗಿಲ್ಲ ಅಂದ್ರು ರಷ್ಯಾದಿಂದ  ಬಹಳ ಕಡಿಮೆ ಬೆಲೆಯಲ್ಲಿ ತೈಲ ತಗೊಂಡ್ವಿ ಅಂದ್ರು, ಮೋದಿ ಅವರು ಇರೋ ಬರೋ ದೇಶವೆಲ್ಲ ಸುತ್ತಿದ್ದಾರೆ. ಹಾಗದರೆ ದೇಶಕ್ಕೆ ಒಳ್ಳೆದಾಗಿದೆ ಅಂತಾ ಯಾಕೆ ಹೇಳಿದ್ರು  ಇದಕ್ಕೆಲ್ಲಾ ಯಾರು ಕಾರಣ ಎಂದು ಪ್ರಶ್ನೆ ಮಾಡಿದರು. 

ವಾರಕ್ಕೆ ಮೂರು ಬಾರಿ ಬೆಲೆ ಏರಿಕೆ ಮಾಡುವ ಇವರ ನೀತಿಗಳು ಹೇಗೆ ವಿಫಲವಾಗಿದೆ ಎಂದು ತಿಳಿದುಬದಿದೆ. ದೇಶದ ಆರ್ಥಿಕತೆ ಸಂಪೂರ್ಣ ಕುಸಿದಿದೆ. ನಮ್ಮ ಸರ್ಕಾರ ಇದ್ದಾಗ ಯುದ್ದಗಳು ಆಗಿಲ್ಲವಾ, ಈ ಪ್ರಶ್ನೆ ಮೊದಲು ಮೋಹನ್ ಭಗವತ್ ಅವರಿಗೆ ಕೇಳಬೇಕು ಎಂದು ಕುಟುಕಿದರು. 

Share this Story:

Follow Webdunia kannada

ಮುಂದಿನ ಸುದ್ದಿ

₹900ಕೋಟಿ ವೆಚ್ಚದಲ್ಲಿ ದೇಶದ ಎರಡನೇ ಅತಿ ದೊಡ್ಡ ಕ್ರೀಡಾಂಗಣಕ್ಕೆ ಸಿದ್ದರಾಮಯ್ಯ ಶಂಕುಸ್ಥಾಪನೆ