Publish Date: Mon, 15 May 2023 (19:30 IST)
Updated Date: Mon, 15 May 2023 (18:23 IST)
ತನಗೆ ಟಿಕೆಟ್ ಕೈ ತಪ್ಪಲು ಮಾಜಿ ಶಾಸಕ C.T ರವಿ ಕಾರಣವೆಂದು ದೂರುತ್ತಿದ್ದ ಮಾಜಿ ಶಾಸಕ M.P ಕುಮಾರಸ್ವಾಮಿ C.T ರವಿ ಸೋಲನ್ನು ಸಂಭ್ರಮಿಸಿದ್ದಾರೆ.. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಮಾತನಾಡಿದ M.P ಕುಮಾರಸ್ವಾಮಿ, C.T ರವಿ ನನ್ನನ್ನ ಬಿಜೆಪಿಯಿಂದ ಕಳಿಸಿದ್ರು, ಅವರು ಕ್ಷೇತ್ರವನ್ನೇ ಖಾಲಿ ಮಾಡಬೇಕಾಯ್ತು. ಚಿಕ್ಕಮಗಳೂರು ಇನ್ಮುಂದೆ ವೀರಶೈವ ಲಿಂಗಾಯತರ ಕ್ಷೇತ್ರ.. C.T ರವಿ ದತ್ತಮಾಲೆ, ಅಹಿತಕರ ಘಟನೆ ಇಟ್ಕೊಂಡು ಹೋದ್ರು, ಅದು ಇನ್ಮುಂದೆ ವರ್ಕ್ ಆಗಲ್ಲ ಎಂದು ಲೇವಡಿ ಮಾಡಿದ್ರು. ಚಿಕ್ಕಮಗಳೂರಲ್ಲಿ ಒಕ್ಕಲಿಗರು ಇರೋದು ಆರೇ ಸಾವಿರ ಮತದಾರರು ಅಷ್ಟೆ.. ಮಾಜಿ ಸಿಎಂ B.S ಯಡಿಯೂರಪ್ಪ ಸ್ವಿಚ್ ಆಫ್ ಮಾಡಲಿಲ್ಲ, ಮಾಡಿದ್ರೆ ಬಿಜೆಪಿಗೆ 50 ಸೀಟ್ ಅಷ್ಟೆ ಬರ್ತಿತ್ತು.. ಜೆಡಿಎಸ್ನಲ್ಲಿ ಬೂತ್ ಕಮಿಟಿ, ಪಕ್ಷ ಸಂಘಟನೆ ಇರಲಿಲ್ಲ, ಹಾಗಾಗಿ ನಾನು ಸೋತೆ.. ಎಲ್ಲಾ ಸರಿ ಮಾಡಿಕೊಂಡು ಚುನಾವಣೆ ಮಾಡೋದು ಆಗ್ತಿರಲಿಲ್ಲ, ಕಷ್ಟವಾಗಿತ್ತು.. ಮುಂದೆ ಎಲ್ಲಾ ಸರಿ ಮಾಡಿಕೊಂಡು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಎಲೆಕ್ಷನ್ ಮಾಡ್ತೀವಿ.. ಮೂಡಿಗೆರೆ ಬಿಜೆಪಿಗೆ ಜೀವ ತುಂಬಿದವನೇ ನಾನು ಎಂದು ಹೇಳಿದ್ರು.