ಮೊಬೈಲ್ ಟಾರ್ಚ್ ನಲ್ಲಿ ಬಸ್ ಓಡಿಸಿದ ಪ್ರಕರಣ: ಚಾಲಕ ಸೇರಿ ಮೂವರು ಸಸ್ಪೆಂಡ್

ಕೃಷ್ಣವೇಣಿ ಕೆ
ಸೋಮವಾರ, 6 ಜುಲೈ 2026 (18:25 IST)
ಕಲಬುರಗಿ: ಮೊಬೈಲ್ ಟಾರ್ಚ್ ನಲ್ಲಿ ಬಸ್ ಓಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕ ಸೇರಿ ಮೂವರು ಸಿಬ್ಬಂದಿಗಳನ್ನು ಸೇವನೆಯಿಂದ ಅಮಾನತು ಮಾಡಲಾಗಿದೆ.

ಕಲಬುರಗಿಯಿಂದ ಚಿಂಚೋಳಿಗೆ ರಾತ್ರಿ ವೇಳೆ ಸಂಚರಿಸುತ್ತಿದ್ದ ಕೆಎಸ್ಆರ್ ಟಿಸಿ ಬಸ್ ನಲ್ಲಿ ಹೆಡ್ ಲೈಟ್ ಇಲ್ಲದೇ ಮೊಬೈಲ್ ಟಾರ್ಚ್ ನ ಬೆಳಕಿನಲ್ಲಿ ಓಡಿಸಲಾಗಿತ್ತು. ಈ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ, ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.

ನಿರ್ವಾಹಕ ತನ್ನ ಮೊಬೈಲ್ ಟಾರ್ಚ್ ಹಿಡಿದಿದ್ದರೆ ಚಾಲಕ ಅದೇ ಬೆಳಕಿನಲ್ಲಿ ಬಸ್ ಓಡಿಸುತ್ತಿದ್ದ. ಇದು ಅಪಾಯಕಾರಿಯಾಗಿತ್ತು. ಪ್ರಯಾಣಿಕರ ಜೀವಕ್ಕೆ ಕುತ್ತು ತರುವಂತಹ ಇಂತಹ ಘಟನೆ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ಕಂಡುಬಂದಿತ್ತು.

ಇದರ ಬೆನ್ನಲ್ಲೇ ಎಚ್ಚೆತ್ತ ಕೆಎಸ್ಆರ್ ಟಿಸಿ ಆಂತರಿಕ ತನಿಖೆ ನಡೆಸಿ ಚಾಲಕ ಮತ್ತು ತಾಂತ್ರಿಕ ಸಿಬ್ಬಂದಿ ಮತ್ತು ತಾಂತ್ರಿಕ ಮೇಲ್ವಿಚಾರಕನನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳ ಮೇಲೆ ಪದೇಪದೇ ದೌರ್ಜನ್ಯ: ವಿಜಯೇಂದ್ರ

ಸಹೋದ್ಯೋಗಿ ಜೊತೆ ಚಕ್ಕಂದವಾಡಿ ಪತ್ನಿ ಕೈಯಲ್ಲಿ ಸಿಕ್ಕಿ ಹಾಕಿಕೊಂಡ ಪೊಲೀಸಪ್ಪ: ಮುಂದೇನಾಯ್ತು ನೋಡಿ Video

ಪ್ರಹ್ಲಾದ್ ಜೋಶಿ ದಾಳಕ್ಕೆ ಕುಮಾರಸ್ವಾಮಿ ಬಲಿಯಾಗುತ್ತಿರುವುದೇಕೆ: ಬಿ.ಕೆ. ಹರಿಪ್ರಸಾದ್

ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ, ಜೆಡಿಎಸ್ ದೂರು, ಎಸ್ಐಆರ್ ಬುಡಮೇಲು ಮಾಡಲು ಷಡ್ಯಂತ್ರ: ಪ್ರಲ್ಹಾದ ಜೋಶಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments