Select Your Language

Notifications

webdunia
webdunia
webdunia
webdunia

ಕೆಎಸ್ ಆರ್ ಟಿಸಿ ಬಸ್ ದರ ಏರಿಕೆ ಮಾಡಲು ಹೊರಟ: ಈ ಬಾರಿ ಇಷ್ಟು ಹೆಚ್ಚಳ ಮಾಡ್ತಿದ್ರೆ ಜನರಿಗೆ ನಿಜಕ್ಕೂ ಬರೆ ಗ್ಯಾರಂಟಿ

KSRTC
ಬೆಂಗಳೂರು: ಡೀಸೆಲ್ ಬೆಲೆ ಏರಿಕೆಯಾಗಿದೆ ಎಂಬ ಕಾರಣಕ್ಕೆ ರಾಜ್ಯ ಸಾರಿಗೆ ಬಸ್ ಗಳ ಟಿಕೆಟ್ ದರ ಏರಿಕೆಗೆ ಸರ್ಕಾರ ಮುಂದಾಗಿದೆ. ಈ ಬಾರಿ ಏರಿಕೆಯಾಗುತ್ತಿರುವ ಪ್ರಮಾಣ ನೋಡಿದರೆ ಜನರಿಗೆ ಬರೆ ಗ್ಯಾರಂಟಿ.

ಡೀಸೆಲ್ ಬೆಲೆ ಏರಿಕೆಯಾಗಿರುವುದರಿಂದ ದರ ಏರಿಕೆ ಅನಿವಾರ್ಯ ಎಂದು ಸಾರಿಗೆ ನಿಗಮಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಇದಕ್ಕೆ ಸರ್ಕಾರ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ರಾಜ್ಯದ ಹಿತಕ್ಕಾಗಿ ಬೆಲೆ ಏರಿಕೆ ಅನಿವಾರ್ಯ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು.

ಕಳೆದ ಬಾರಿ ಟಿಕೆಟ್ ದರವನ್ನು ಶೇ.15 ರಷ್ಟು ಏರಿಕೆ ಮಾಡಲಾಗಿತ್ತು. ಆದರೆ ಈ ಬಾರಿ ಶೇ.25 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾದಲ್ಲಿ ಇನ್ನು, ದೂರ ಪ್ರಯಾಣದ ಐಷಾರಾಮಿ ಬಸ್ ಗಳು ಮಧ್ಯಮ ವರ್ಗದವರಿಗೆ ಗಗನ ಕುಸುಮವಾಗಲಿದೆ. ಈ ರೀತಿ ದರ ಏರಿಕೆ ಮಾಡುತ್ತಿರುವುದಕ್ಕೆ ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಒಂದೆಡೆ ಸಾಮಾನ್ಯ ಸಾರಿಗೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ನೀಡಿ ಇತ್ತ ಪದೇ ಪದೇ ಬಸ್ ಪ್ರಯಾಣ ದರವನ್ನೂ ಹೆಚ್ಚು ಮಾಡುವುದರಿಂದ ಏನು ಪ್ರಯೋಜನ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕ ಅಧ್ಯಕ್ಷರ ಬೆದರಿಕೆಗೆ ಇರಾನ್ ತೀವ್ರ ಆಕ್ರೋಶ: ಶಾಂತಿ ಮಾತುಕತೆಯಿಂದ ಹೊರನಡೆದ ನಿಯೋಗ