Publish Date: Sun, 21 Jun 2026 (18:02 IST)
Updated Date: Sun, 21 Jun 2026 (18:06 IST)
ಬೆಂಗಳೂರು: ಆರ್‌ಎಸ್‌ಎಸ್‌ನವರು ಪುಕ್ಕಲರು, ಅವರಿಗೆ ಧೈರ್ಯವಿಲ್ಲ. ಆದರೆ, ನಾವು ಮೈಮರೆಯುತ್ತಿದ್ದೇವೆ. ಅದಕ್ಕಾಗಿಯೇ ಅವರು ವಿಜೃಂಭಿಸುತ್ತಿದ್ದಾರೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಆಕ್ರೋಶ ಹೊರಹಾಕಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರ ಬೆನ್ನಲ್ಲೇ ಆರ್‌ಎಸ್‌ಎಸ್ ವಿರುದ್ಧ ಗುಡುಗಿದ ಹರಿಪ್ರಸಾದ್, ನನ್ನ ಜೀವನದ ಮಹತ್ವಪೂರ್ಣ ದಿನ. ಇದು ಅಧಿಕಾರ ಅಲ್ಲ. 141 ವರ್ಷಗಳ ಪವಿತ್ರ ಪಕ್ಷ ಕಾಂಗ್ರೆಸ್. ಇದರೆಲ್ಲ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಕಾರಣ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ವೇಣುಗೋಪಾಲ ಸುರ್ಜೆವಾಲಾ.
ಇವರಿಗೆಲ್ಲ ಶತಕೋಟಿ ನಮಸ್ಕಾರ. ಇದು ಪವಿತ್ರವಾದ ಪಕ್ಷ, ಇದು ದೇವಸ್ಥಾನದಲ್ಲೋ ಮಸೀದಿಯಲ್ಲೋ, ಚರ್ಚಿನಲ್ಲೋ ಇಲ್ಲ. ಬ್ರಿಟಿಷರ ಕೆಳಗಡೆ ಗುಲಾಮಗಿರಿ ಇದ್ದಾಗ ಹೋರಾಟ ಮಾಡಿದ ಪಕ್ಷ ಕಾಂಗ್ರೆಸ್ ಹಲವು ಧರ್ಮಗಳು ಇರುವ ಬಹುತ್ವದ ರಾಷ್ಟ್ರ ಇದು. ಮಹಾತ್ಮಾ ಗಾಂಧಿ ಪರಿಕಲ್ಪನೆಯ ಅಡಿಯಲ್ಲಿ ನಿರ್ಮಾಣವಾದ ರಾಷ್ಟ್ರ ಇದು ಎಂದು ಹೇಳಿದರು.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ