Daily Horoscope

Select Your Language

Notifications

webdunia
webdunia
webdunia
webdunia

ಕೆಸ್ಆರ್ ಟಿಸಿ ಬಸ್ ಕೇರಳಂನಲ್ಲಿ ಫ್ರೀ, ಕರ್ನಾಟಕದಲ್ಲಿ ಫ್ರೀ: ಆದ್ರೆ ಗಡಿನಾಡ ಮಹಿಳೆಯರಿಗೆ ನೋ ಯೂಸ್

Keralam KSRTC Bus
ಮಂಗಳೂರು: ಕೆಎಸ್ಆರ್ ಟಿಸಿ ಬಸ್ ಕೇರಳಂನಲ್ಲಿ ಫ್ರೀ, ಕರ್ನಾಟಕದಲ್ಲೂ ಫ್ರೀ.. ಆದರೆ ಗಡಿನಾಡ ಮಹಿಳೆಯರಿಗೆ ನೋ ಯೂಸ್... ಈ ಬಗ್ಗೆ ಇಲ್ಲಿದೆ ಒಂದು ವಿಶ್ಲೇಷಣೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಇಲ್ಲಿನ ಸರ್ಕಾರೀ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಜಾರಿಗೆ ತಂದಿದೆ. ಇದರಿಂದ ಕರ್ನಾಟಕದ ನಿವಾಸಿಗಳಾಗಿರುವ ಮಹಿಳೆಯರಿಗೆ ಕರ್ನಾಟಕದೊಳಗೇ ಉಚಿತವಾಗಿ ಸಾದಾ ಬಸ್ ಗಳಲ್ಲಿ ಸಂಚರಿಸಲು ಅವಕಾಶ ಸಿಕ್ಕಿದೆ.

ಇದೀಗ ಕೇರಳಂನಲ್ಲೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಇಲ್ಲೂ ಉಚಿತ ಪ್ರಯಾಣದ ಘೋಷಣೆ ಮಾಡಿದೆ. ಅದರಂತೆ ಜೂನ್ 15 ರಿಂದ ಕೇರಳಂನಲ್ಲೂ ಕೆಎಸ್ಆರ್ ಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶವಿದೆ.

ಆದರೆ ಇದರಿಂದ ಗಡಿನಾಡು ಕಾಸರಗೋಡು ಮತ್ತು ದಕ್ಷಿಣ ಕನ್ನಡದ ನಡುವೆ ನಿತ್ಯವೂ ಓಡಾಡುವ ಸಾವಿರಾರು ಮಹಿಳೆಯರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಯಾಕೆಂದರೆ ಕಾಸರಗೋಡಿನಿಂದ ಮಂಗಳೂರು ಕಡೆಗೆ ಮತ್ತು ಕಾಸರಗೋಡಿನಿಂದ ಪುತ್ತೂರು ಕಡೆಗೆ ಸಂಚರಿಸುವ ಕೆಎಸ್ ಆರ್ ಟಿಸಿ ಬಸ್ ಗಳು ಅಂತರ್ ರಾಜ್ಯ ಬಸ್ ಎಂದು ಪರಿಗಣಿಸಲ್ಪಡುತ್ತವೆ.

ರಾಜ್ಯದೊಳಗೇ ಮಾತ್ರ ಉಚಿತ ಪ್ರಯಾಣ ಎನ್ನುವ ಕಾರಣಕ್ಕೆ ನಿತ್ಯವೂ ಕಾಸರಗೋಡಿನಿಂದ ಮಂಗಳೂರು ಕಡೆಗೆ ಮತ್ತು ಕಾಸರಗೋಡಿನಿಂದ ಪುತ್ತೂರು ಕಡೆಗೆ ಸಂಚರಿಸುವ ಮಹಿಳಾ ಪ್ರಯಾಣಿಕರಿಗೆ ಇದರ ಲಾಭ ಸಿಗುವುದಿಲ್ಲ.

ಹೇಗಿದ್ದರೂ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಉಚಿತ ಪ್ರಯಾಣ ಯೋಜನೆಯೂ ಇದೆ. ಹೀಗಾಗಿ ಗಡಿನಾಡಿನ ಬಸ್ ಗಳಲ್ಲಿ ಅಂತರ್ ರಾಜ್ಯ ನಿಯಮ ಸಡಿಲಿಕೆ ಮಾಡಿ ಕಾಸರಗೋಡಿನಿಂದ ಮಂಗಳೂರುವರೆಗೆ ಇತ್ತ ಪುತ್ತೂರುವರೆಗೂ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಿ ಎಂದು ಗಡಿನಾಡ ಪ್ರಯಾಣಿಕರು ಬೇಡಿಕೆಯಿಟ್ಟಿದ್ದಾರೆ. ಇದನ್ನು ಸರ್ಕಾರ ಪರಿಗಣಿಸಿದರೆ ಮಾತ್ರ ಕಾಸರಗೋಡಿನ ಪ್ರಯಾಣಿಕರಿಗೆ ಉಚಿತ ಬಸ್ ಪ್ರಯಾಣದ ಅನುಕೂಲ ಸಿಗಲಿದೆ. ಇಲ್ಲದೇ ಹೋದಲ್ಲಿ ಇದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಲಿದೆ. ಯಾಕೆಂದರೆ ಈ ಕಾಸರಗೋಡು ಜಿಲ್ಲೆಯಲ್ಲಿ ಕೆಎಸ್ಆರ್ ಟಿಸಿ ಬಸ್ ಗಳಿಗಿಂತ ಖಾಸಗಿ ಬಸ್ ಗಳ ಓಡಾಟವೇ ಹೆಚ್ಚು. ಇಲ್ಲಿ ಜಿಲ್ಲೆಯೊಳಗೇ ಗಡಿ ಭಾಗಕ್ಕೆ ಹೊಂದಿಕೊಂಡು ಸರ್ಕಾರೀ ಬಸ್ ಗಳ ಸೇವೆ ವಿರಳ. ಹೀಗಾಗಿ ಗಡಿನಾಡ ಪ್ರಯಾಣಿಕರು ಎರಡೂ ಸರ್ಕಾರಕ್ಕೆ ಉಚಿತ ಪ್ರಯಾಣದ ಅನುಕೂಲ ನಮಗೂ ಸಿಗುವಂತೆ ಮಾಡಿ ಎಂದು ಮೊರೆಯಿಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಕ್ರೋಚ್ ಜನತಾ ಪಾರ್ಟಿಗೆ ಎಎಪಿ ಲಿಂಕ್ ಇದೆಯೇ, ಬಾಂಗ್ಲಾ, ನೇಪಾಳ ರೀತಿ ಜೆನ್ ಜಿ ಕ್ರಾಂತಿಗೆ ಹುನ್ನಾರವೇ